ಭಟ್ಕಳ (Bhatkal): ಲಕ್ಕಿ ಡ್ರಾ (Lucky draw) ಮೂಲಕ ಆಮಿಷವೊಡ್ಡಿ ಅನಿಯಮಿತ ಸದಸ್ಯರಿಂದ ತಿಂಗಳಿಗೆ ೧೦೦೦ ರೂ. ಹಣ ಕಟ್ಟಿಸಿಕೊಳ್ಳುತ್ತಿದ್ದ ಸ್ಕೀಮ್‌ಗೆ ಮುರ್ಡೇಶ್ವರ (Murdeshwar) ಪೊಲೀಸರು ತಡೆಯೊಡ್ಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುರ್ಡೇಶ್ವರದ ಲೋಕೇಶ ನಾಯ್ಕ, ಕಾರ್ಕಳದ  ಸಿಯಾನ್‌ ಶರೀಫ್‌ ಮತ್ತು ಸ್ಕೀಮ್‌ನ ಇತರ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿತರು ಕಾಯ್ಕಿಣಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುರ್ಡೇಶ್ವರ ಬಸ್ತಿಯಲ್ಲಿ ಗೋಲ್ಡನ್‌ ಗ್ರೂಪ್‌ ಎಲೆಕ್ಟ್ರಾನಿಕ್‌ ಮತ್ತು ಫರ್ನಿಚರ್‌ ಅಂಗಡಿಯಲ್ಲಿ ಲಕ್ಕಿ ಡ್ರಾ (Lucky draw) ಸ್ಕೀಂ ನಡೆಸುತ್ತಿದ್ದರು. ಗೋಲ್ಡನ್‌ ಗ್ರೂಪ್‌ ಎಂಬ ಹೆಸರಿನಲ್ಲಿ ಆರೋಪಿತರು ಅಕ್ರಮವಾಗಿ ಸ್ಕೀಮ್‌ ಚಲಾಯಿಸುತ್ತಿದ್ದರು.

ಇದನ್ನೂ ಓದಿ :  ಆಟೋ ಡಿಕ್ಕಿಯಾಗಿ ಸ್ಕೂಟರ್ ಸವಾರಗೆ ಗಾಯ

ಆರೋಪಿತರು ಸದಸ್ಯರಿಂದ ೧೦೦೦ ರೂ. ಪ್ರತಿ ತಿಂಗಳ ತುಂಬಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಸದಸ್ಯರಿಗೆ ವಿವಿಧ ರೀತಿಯ ದುಬಾರಿ ಬೆಲೆಯ ಬಹುಮಾನಗಳನ್ನು ಲಕ್ಕಿ ಡ್ರಾ ಮೂಲಕ ನೀಡುವ ಆಮಿಷ ಒಡ್ಡಲಾಗಿತ್ತು. ಈ ಯೋಜನೆಯ ಬಗ್ಗೆ ಭಿತ್ತಿ ಪತ್ರ ಮತ್ತು ಬಹುಮಾನ ಚೀಟಿಯನ್ನು ಸಾರ್ವಜನಿಕರಿಗೆ ಹಂಚುತ್ತ ಪ್ರಚಾರ ಮಾಡಲಾಗಿತ್ತು. ಇದರ ಬಗ್ಗೆ ಮಾಹಿತಿ ಪಡೆದ ಮುರ್ಡೇಶ್ವರ ಠಾಣೆಯ ಸಹಾಯಕ ಪಿಎಸೈ ದೇವೇಂದ್ರ ಕೆ. ನಾಯ್ಕ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು (Case registered) ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಅನಂತ ಶ್ರೀನಿವಾಸ ಪೈ ನಿಧನ