ಭಟ್ಕಳ (Bhatkal): ಮುರ್ಡೇಶ್ವರ (Murudeshwar) ದೇವಸ್ಥಾನದ ನಿರ್ಗಮನ ದ್ವಾರದ ಗೂಡಂಗಡಿ ಸ್ಥಳಾಂತರ ಮಾಡುವಂತೆ ಭಟ್ಕಳ ತಹಶೀಲ್ದಾರರಿಗೆ ಮುರ್ಡೇಶ್ವರ ಮಾವಳ್ಳಿ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದ ಶ್ರೀಧರ ಲಚ್ಮಯ್ಯ ನಾಯ್ಕ ಮನವಿ ಸಲ್ಲಿಸಿದ್ದಾರೆ (Memorandum).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರ್ಡೇಶ್ವರದ (Murudeshwar) ದೇವಸ್ಥಾನದ ನಿರ್ಗಮನ ದ್ವಾರದ ರಸ್ತೆಯ ಮೇಲೆ ಇರುವ ಗೂಡಂಗಡಿಗಳನ್ನು ಬೀಚ್ ಗೆ ಸ್ಥಳಾಂತರ ಮಾಡಲು ಸ್ಥಳಿಯ ಗ್ರಾಮ ಪಂಚಾಯತ ಮಾವಳ್ಳಿ ೧ಕ್ಕೆ ಮನವಿ ಕೊಡಲಾಗಿತ್ತು. ಜಿಲ್ಲಾಧಿಕಾರಿಗಳ ವಾಟ್ಸಪ್ ನಂಬರ್ ಗೆ ಕೂಡ ದೂರ ನೀಡಲಾಗಿತ್ತು. ಆ ದೂರಿನನ್ವಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗೆ ಸೂಕ್ರ ಕ್ರಮ ಕೈಗೊಳ್ಳಲು ಆದೇಶ ಬಂದಿತ್ತು. ತಾಪಂ ಇಒ ಅವರು ಮಾವಳ್ಳಿ೧ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ಅಗತ್ಯ ಕ್ರಮ ಕೈಗೊಳ್ಳಲು ನೋಟೀಸ್ ಜಾರಿ ಮಾಡಿದ್ದರು. ಆದರೆ, ಗೂಡಂಗಡಿಕಾರರ ಅಧ್ಯಕ್ಷರಿಗೆ ಗ್ರಾಮ ಪಂಚಾಯತ ನೋಟೀಸ್ ಜಾರಿ ಮಾಡಿ ಕೈ ತೊಳೆದುದುಕೊಂಡಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಚಿತ್ರಕಲಾ ಶಿಕ್ಷಕಗೆ “ಶಿಕ್ಷಣ ರತ್ನ” ರಾಜ್ಯ ಪ್ರಶಸ್ತಿ
ಇಲ್ಲಿಯವರೆಗೆ ದೂರಿಗೆ ಸಂಬಂಧಿಸಿ ಪೋಲೋಪ್ ಮಾಡದೆ ಕಣ್ಣಿದ್ದೂ ಕುರುಡರಂತೆ ಇದ್ದಾರೆ. ಇದರಿಂದ ಮುಂದೆ ಟ್ರಾಫಿಕ್ ಸಮಸ್ಯೆ ಆಗಿ ಸಾರ್ವಜನಿಕರಿಗೆ ತೊಂದರೆ ಆಗಬಹುದು. ಗೂಡಂಗಡಿಕಾರರಿಗೆ ಅಂಗಡಿ ಮಳಿಗೆ ಇಟ್ಟುಕೊಳ್ಳಲು ಉತ್ತರ ಕನ್ನಡ (Uttara Kannada) ಜಿಲ್ಲಾ ಪಂಚಾಯತ್ CEO ಮತ್ತು ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಪ್ರವಾಸಿಗರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಆಗದೆ ಇರುವ ರೀತಿಯಲ್ಲಿ ರಸ್ತೆಯಿಂದ ೫೦ ಮೀಟರ್ ಹಿಂದಿನಿಂದ ಬಿಚ್ ನಲ್ಲಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡುವಂತೆ ಪಂಚಾಯತ್ ಠರಾವು ಮಾಡುವಂತೆ ಸಲಹೆ ನೀಡಿದ್ದರು. ಗ್ರಾಮ ಪಂಚಾಯತ್ ಠರಾವು ಮಾಡಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ಕೊಟ್ಟಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಒಂದೊಂದೇ ಗೂಡಂಗಡಿ ಬೀಚ್ ಬಿಟ್ಟು ರಸ್ತೆ ಮೇಲೆ ಬಂದಿವೆ. ಇದರಿಂದ ರಿಕ್ಷಾ ರಸ್ತೆಯಲ್ಲಿ ನಿಲ್ಲಬೇಕಾಗಿದೆ. ಇದರಿಂದ ಪ್ರವಾಸಿಗರ ಸಮೇತ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ಆಗುತ್ತಿದೆ. ಕೂಡಲೇ ಮುರ್ಡೇಶ್ವರದ (Murdeshwar) ರಸ್ತೆಯ ಮೇಲೆ ಬಂದ ಎಲ್ಲಾ ಗೂಡಂಗಡಿಗಳನ್ನು ಬೀಚ್ ಗೆ ಸ್ಥಳಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಹಿಂದಿ ಶಿಕ್ಷಕಗೆ ಡಾಕ್ಟರೇಟ್ ಪದವಿ ಪ್ರದಾನ