ಭಟ್ಕಳ (Bhatkal) : ಮಂಗಳೂರಿನ (Mangaluru) ಇನ್‌ಯೂನಿಟಿಯ ಸಹಯೋಗದಲ್ಲಿ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ (AITM) ಮೊದಲ ವರ್ಷದ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (BE) ವಿದ್ಯಾರ್ಥಿಗಳಿಗಾಗಿ ಬ್ರಿಡ್ಜ್ ಕೋರ್ಸ್ (bridge course) ಆಯೋಜಿಸಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕಾರ್ಯಕ್ರಮವು (bridge course) ವಿದ್ಯಾರ್ಥಿಗಳನ್ನು ಅಗತ್ಯ ಎಂಜಿನಿಯರಿಂಗ್ ತಂತ್ರಜ್ಞಾನ, ಉಪಕರಣಗಳ ಬಳಕೆ ಹಾಗೂ ಪ್ರಯೋಗಶಾಲಾ ಕಾರ್ಯಗಳಲ್ಲಿ ಪರಿಣತಿಗೊಳ್ಳುವಂತೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿತ್ತು. ಈ ಕೋರ್ಸ್‌ನ ವೈಶಿಷ್ಟ್ಯವೆಂದರೆ ಸಂವಾದಾತ್ಮಕ ತರಗತಿಗಳು, ಪ್ರಾಜೆಕ್ಟ್‌ಗಳ ಸರಣಿ ಹಾಗೂ ಪ್ರಾಯೋಗಿಕ ತರಬೇತಿ ಅವಧಿಗಳು, ಅನೇಕ ಎಂಜಿನಿಯರಿಂಗ್ ಉಪಕರಣಗಳ ಪರಿಣಾಮಕಾರಿ ಬಳಕೆ ಮತ್ತು ಹುದ್ದೆಗಳ ಸವಾಲುಗಳನ್ನು ನಿಭಾಯಿಸುವುದನ್ನು ಕಲಿಯಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಬ್ರಿಡ್ಜ್ ಕೋರ್ಸ್ ಮುಗಿಸಿದ ನಂತರ ತಂತ್ರಜ್ಞಾನದಲ್ಲಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಆತ್ಮವಿಶ್ವಾಸದಿಂದ ಮುಂದೆ ಸಾಗಲು ಸಜ್ಜುಗೊಳ್ಳುತ್ತಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದನ್ನೂ ಓದಿ : ಸಾಗರ ತಾಲೂಕಿನಲ್ಲಿ ಚಿರತೆ ಕಾಟ
ಕಾರ್ಯಕ್ರಮದ ಸಮಾರೋಪದಲ್ಲಿ ಪ್ರಾಂಶುಪಾಲ ಡಾ. ಫಜಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಅಪ್ಲೈಡ್ ಸೈನ್ಸ್ (Applied Science) ವಿಭಾಗದ ಮುಖ್ಯಸ್ಥ ಪ್ರೊ.ವಸೀಮ್ ಅಹ್ಮದ್ ಹಲವೇಗಾರ್ ಹಾಗೂ ಎಐಟಿಎಂ (AITM)ನ ಇತರ ಅಧ್ಯಾಪಕರು ಇದ್ದರು.
ಇದನ್ನೂ ಓದಿ : ಜ್ಞಾನೇಶ್ವರಿ ಕಾಲೇಜಿನಲ್ಲಿ ದೀಪದಾನ ಕಾರ್ಯಕ್ರಮ