ಭಟ್ಕಳ (Bhatkal) : ಕರ್ನಾಟಕ ರತ್ನ (Karnataka Ratna) ಅಪ್ಪು (Appu) ಅಭಿಮಾನಿಗಳ ಸೇವಾದಳ ವತಿಯಿಂದ ಅಪ್ಪು ದೀಪಾವಳಿ ಉತ್ಸವ (Deepavali Utsav) ಎನ್ನುವ ವಿನೂತನ ಕಾರ್ಯಕ್ರಮದಡಿಯಲ್ಲಿ ೧೨ ಬಡ ಕುಟುಂಬಗಳಿಗೆ ಇಲ್ಲಿನ ಸೋಡಿಗದ್ದೆ ಕ್ರಾಸ್ ನಲ್ಲಿರುವ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ದಿನಸಿ ಕಿಟ್ ವಿತರಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಬಾರಿಯ ದೀಪಾವಳಿ ಹಬ್ಬದಲ್ಲಿ ದಿ. ಡಾ. ಪುನೀತ ರಾಜಕುಮಾರ (Punit Rajkumar) ಹೆಸರಿನಲ್ಲಿ ಕೆಲ ಬಡವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಾನಿಗಳ ಸಹಾಯದಿಂದ ಸಂಗ್ರಹಿಸಿದ ಹಣದಲ್ಲಿ ತಾಲೂಕಿನ ೧೨ ಬಡ ಕುಟುಂಬಗಳಿಗೆ ೧೭೦೦ ರೂ. ಮೊತ್ತ ದಿನಸಿ ಕಿಟ್ ಗಳನ್ನು ವಿತರಿಸಲಾಗಿದೆ. ಈ ಸಂದರ್ಭದಲ್ಲಿ ಗಣಪತಿ ನಾಯ್ಕ, ಪ್ರಮೋದ ನಾಯ್ಕ, ನಾಗೇಶ ನಾಯ್ಕ, ರವೀಂದ್ರ ಮೊಗೇರ, ವಿಶ್ವನಾಥ ಮೊಗೇರ ಇದ್ದರು.

ಇದನ್ನೂ ಓದಿ : ಸಾಗರದಲ್ಲಿ ಆಹಾರ ಮೇಳ ಉದ್ಘಾಟನೆ

ಈ ಬಗ್ಗೆ ಮಾತನಾಡಿದ ಸೇವಾದಳದ ಸದಸ್ಯ ತಿಮ್ಮಯ್ಯ ನಾಯ್ಕ, ಪುನೀತ ರಾಜಕುಮಾರ (Appu) ಸಿನಿಮಾಗಳ ಹೊರತಾಗಿ ಹಲವು ಸಮಾಜಸೇವೆ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಡ ಕುಟುಂಬ, ಅನಾಥಾಶ್ರಮ, ಗೋ ಶಾಲೆ ಸೇರಿದಂತೆ ಅದೆಷ್ಟೋ ಜನರಿಗೆ ಲೆಕ್ಕವಿಲ್ಲದಷ್ಟು ಸಹಾಯ ಸಹಕಾರ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಅವರು ಮಾಡಿಕೊಟ್ಟ ಹಾದಿಯಲ್ಲಿ ನಮ್ಮ ಕೈಲಾಗುವಷ್ಟು ಬಡ ಜನರಿಗೆ ದಾನಿಗಳ ಸಹಾಯದಿಂದ ಸಹಾಯ ಮಾಡುತ್ತಿದ್ದೇವೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ :  ಭಟ್ಕಳದಲ್ಲಿ ಆರ್‌ಎಸ್‌ಎಸ್‌ ಭವ್ಯ ಪಥಸಂಚಲನ

ಈ ಸಂಘವು ಈಗಾಗಲೇ ಅನೇಕರಿಗೆ ಸಹಾಯ ಹಸ್ತ ನೀಡಿ ನೆರವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ತಾಲೂಕಿನ ಯಲ್ವಡಿಕವೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನಾರೋಗ್ಯ ಪೀಡಿತ ಬಡ ಮಹಿಯೋರ್ವಳ ಚಿಕಿತ್ಸೆಗೆ ದಾನಿಗಳ ಸಹಾಯದಿಂದ ೨೭ ಸಾವಿರಕ್ಕೂ ಅಧಿಕ ಹಣ ಸಂಗ್ರಹಿಸಿ ಕುಟುಂಬಕ್ಕೆ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್