ದಾಂಡೇಲಿ (Dandeli) : ಕ್ಯಾನ್ಸರ್ (cancer) ರೋಗದಿಂದ ಬಳಲುತ್ತಿದ್ದ ಕೃಷಿಕ (farmer) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೋಯಿಡಾ (Joida) ತಾಲೂಕಿನ ಮೌಳಂಗಿ ಗ್ರಾಮದ ಕೃಷಿಕ ರಮೇಶ ಮಲ್ಲಪ್ಪ ತೋರವತ್ (೫೮) ಸಾವಿಗೆ ಶರಣಾದವರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕೃಷಿಕ ರಮೇಶ ಅನ್ನನಾಳದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಇಂದು ನ.೪ರಂದು ಬೆಳಿಗ್ಗೆ ೨ರಿಂದ ೬.೩೦ರ ನಡುವಿನ ಅವಧಿಯಲ್ಲಿ ಸಾವಿಗೆ ಶರಣಾಗಿದ್ದಾರೆ. ಮನೆಯ ಪಕ್ಕ ಇರುವ ಸಿಂಟ್ಯಾಕ್ಸ್ ಇಡುವ ಕಬ್ಬಿಣದ ಸ್ಟ್ಯಾಂಡ್ಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೃತರ ಪುತ್ರ ಶಿವರಾಜ್ ದಾಂಡೇಲಿ (Dandeli) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು (complaint) ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಭಟ್ಕಳಕ್ಕೆ ಜಾನಪದ ಅಕಾಡೆಮಿ ಪ್ರಶಸ್ತಿ ಗರಿ