ಕಾರವಾರ (Karwar): ಉತ್ತರ ಕನ್ನಡ (Uttara kannada) ಜಿಲ್ಲೆಯ ಕಾರವಾರ, ಅಂಕೋಲ (Ankola), ಕುಮಟಾ(Kumta), ಹೊನ್ನಾವರ(Honnavar), ಭಟ್ಕಳ(Bhatkal), ಶಿರಸಿ(Sirsi), ಸಿದ್ದಾಪುರ (Siddapur), ಮುಂಡಗೋಡು(Mundgod), ಹಳಿಯಾಳ(Haliyal), ದಾಂಡೇಲಿ (Dandeli) ಮತ್ತು ಜೋಯಿಡಾ (Joida) ತಾಲೂಕುಗಳ ೧೫ ಗ್ರಾಮ ಪಂಚಾಯತ್ ಗಳಲ್ಲಿ ವಿವಿಧ
ಕಾರಣಗಳಿಂದ ಖಾಲಿ ಇರುವ ಮತ್ತು ತೆರವಾಗಿರುವ ಸದಸ್ಯ ಸ್ಥಾನ ತುಂಬಲು ಉಪ ಚುನಾವಣೆ (GP Election) ಜರುಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನವೆಂಬರ್ ೬ ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ನ. ೧೨ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ
ದಿನಾಂಕವಾಗಿದೆ. ನ.೧೩ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.೧೫ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. ಮತದಾನದ ಅವಶ್ಯವಿದ್ದಲ್ಲಿ, ನ.೨೩ರಂದು ಬೆಳಗ್ಗೆ ೭ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದಲ್ಲಿ ನ. ೨೫ ರಂದು ನಡೆಸಲಾಗುವುದು. ನ.೨೬ ರಂದು ಬೆ. ೮ ಗಂಟೆಗೆ ಮತಗಳ ಎಣಿಕೆಯು ಆಯಾ ತಾಲೂಕಿನ ಕೇಂದ್ರ ಸ್ಥಳದಲ್ಲಿ ನಡೆಯಲಿದೆ ಎಂದು ಚುನಾವಣೆ (GP Election) ಕುರಿತು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :  ವರ್ಗಾವಣೆ ವಿಚಾರದಲ್ಲಿ ೨ ಲಕ್ಷ ರೂ. ನಾನೇ ಕೊಟ್ಟಿದ್ದೆ