ಭಟ್ಕಳ (Bhatkal): ಮನೆಯಲ್ಲಿ ಇದ್ದಾಗ ಕುಸಿದು ಬಿದ್ದ ಯುವತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟ (Young woman died) ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮುಂಡಳ್ಳಿಯ ನೀರಗದ್ದೆ ನಿವಾಸಿ ಫೇಲ್ಸಿಟಾ ಡಿಸೋಜಾ (೨೮) ಮೃತ ಯುವತಿ. ಇವರು ಚಿಕ್ಕಂದಿನಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ (Heart decease) ಬಳಲುತ್ತಿದ್ದರು. ಈ ಬಗ್ಗೆ ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಂಡಿದ್ದ ಅವರು ಔಷಧೋಪಚಾರದಲ್ಲಿ ಇದ್ದರು. ೨ ವರ್ಷಗಳ ಹಿಂದೆ ನೀರಗದ್ದೆಯ ಜೋಯಲ್‌ ಸಾವೆರ್‌ ಡಿಸೋಜಾ ಅವರನ್ನು ಮದುವೆಯಾಗಿದ್ದರು. ನಿನ್ನೆ ನ.೮ರಂದು ಸಂಜೆ ೪.೧೫ರ ಸುಮಾರಿಗೆ ತನಗೆ ಏನೋ ತೊಂದರೆ ಆಗುತ್ತಿದೆ ಅಂತ ಹೇಳಿ ನೆಲದ ಮೇಲೆ ಕುಸಿದು ಬಿದ್ದರು.

ಇದನ್ನೂ ಓದಿ :  ಸಾಮಾಜಿಕ ಕಾರ್ಯಕ್ಕಾಗಿ ರವೀಂದ್ರ ರತ್ನ ಪುರಸ್ಕಾರಕ್ಕೆ ಆಯ್ಕೆ

ಅವರನ್ನು ಗಂಡ ಜೋಯಲ್‌ ತಕ್ಷಣ ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಬರುವ ಪೂರ್ವದಲ್ಲಿಯೇ ಮೃತ ಪಟ್ಟಿರುವುದಾಗಿ (Young woman died) ತಿಳಿಸಿದ್ದಾರೆ. ಈ ಕುರಿತು ಮೃತರ ಸಹೋದರಿ ಹೊನ್ನಾವರದ (Honnavar) ಕಾಸರಕೋಡ ಟೊಂಕ ನಿವಾಸಿ ಸ್ಟೇಫಿಯಾ ಫರ್ನಾಂಡಿಸ್‌ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : coastal island/ ದೇಶದ ಮೊದಲ ಅಧ್ಯಯನಕ್ಕೆ ಸ್ಪಂದಿಸದ ಕರ್ನಾಟಕ