ಚಿತ್ರದುರ್ಗ (Chitradurga) : ಕಳೆದ 15 ವರ್ಷಗಳಿಂದ ಕಾನೂನು ಸಮರದಲ್ಲಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್ ಕೆ ಎಸ್ ಸ್ವಾಮಿ ಅವರನ್ನು ಚಿತ್ರದುರ್ಗದ ಎಸ್ ಜೆ ಎಂ ಫಾರ್ಮಸಿ ಕಾಲೇಜಿಗೆ ಮತ್ತೆ ಪ್ರಾಂಶುಪಾಲರಾಗಿ ಮರುನೇಮಕ ಮಾಡಿಕೊಳ್ಳುವಂತೆ ಕರ್ನಾಟಕ (Karnataka) ಉಚ್ಚ ನ್ಯಾಯಾಲಯ (High Court ) ಆದೇಶ ಹೊರಡಿಸಿದೆ. ಅವರಿಗೆ ಎಲ್ಲಾ ಸೇವಾ ಸೌಲಭ್ಯಗಳನ್ನು ನೀಡಿ ೨೦೦೭ರಿಂದ ಇಲ್ಲಿಯವರೆಗೂ ೫೦% ವೇತನವನ್ನು ನೀಡಬೇಕೆಂದೂ ಆದೇಶಿಸಲಾಗಿದೆ. ಇದರಿಂದ ವೇತನವಿಲ್ಲದೇ ೧೫ ವರ್ಷಗಳಿಂದ ಜೀವನ ನಡೆಸುತ್ತಿದ್ದಂತಹ ಡಾ. ಸ್ವಾಮಿಯವರ ಕಾನೂನು ಸಮರಕ್ಕೆ ತೆರೆ ಬಿದ್ದಂತಾಗಿದೆ.
೧೫ ವರ್ಷಗಳಿಂದ ಎಸ್ ಜೆ ಎಂ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ. ಎಚ್ ಕೆ ಎಸ್ ಸ್ವಾಮಿಯವರು ಎಂ.ಫಾರ್ಮ.ಪಿ.ಹೆಚ್.ಡಿ. ಪದವೀಧರರಾಗಿದ್ದರು. ಅವರನ್ನು ಎಸ್. ಜೆ ಎಂ. ಆಡಳಿತ ಮಂಡಳಿಯ ಆಡಳಿತಾಧಿಕಾರಿ ಎಮ್. ಚಿತ್ರಶೇಖರರವರು ಪ್ರಾಂಶುಪಾಲರನ್ನಾಗಿ ೨೦೦೭ರಂದು ನೇಮಕ ಮಾಡಿ, ಬಡ್ತಿ ನೀಡಿದ್ದರು, ಆದರೆ ಅವರಿಗೆ ಕರ್ತವ್ಯ ನಿರ್ವಹಿಸಲು ಮತ್ತು ವೇತನ ಪಡೆಯಲು ಅವಕಾಶ ನೀಡದಿದ್ದರಿಂದ ತಮಗಾದ ಅನ್ಯಾಯವನ್ನು ಸರಿಪಡಿಸಲು ಹೈಕೋರ್ಟಿನ (High Court ) ಮೊರೆಹೋಗಿದ್ದರು.
ಇದನ್ನೂ ಓದಿ : ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಸಾವು
ನ್ಯಾಯಾಧೀಶರಾದ ಆರ್.ನಟರಾಜ ಅವರು ಆದೇಶ ಮಾಡಿ, ಡಾ. ಸ್ವಾಮಿಯವರ ನೇಮಕವನ್ನು ಎತ್ತಿ ಹಿಡಿದಿದಿದ್ದಾರೆ. ಇವರಿಗೆ ಇನ್ನು ಕೇವಲ ಮೂರು ತಿಂಗಳಷ್ಟು ಮಾತ್ರ ಪ್ರಾಂಶುಪಾಲರಾಗಿ ಸೇವೆ ಮಾಡಲು ಅವಕಾಶವಿದೆ. 2025ರ ಜನವರಿ ೨೨ರಂದು ಇವರು ನಿವೃತ್ತಿ ಹೊಂದಲಿದ್ದಾರೆ. ಹಾಗಾಗಿ ನ್ಯಾಯಾಲಯವು ಕನಿಷ್ಠಪಕ್ಷ ಸೇವಾ ಅವಧಿ ಒಳಗೆ ತೀರ್ಮಾನ ನೀಡಿದ್ದರಿಂದ ಮೂರು ತಿಂಗಳಾದರೂ ಇವರು ಪ್ರಾಂಶುಪಾಲರಾಗಿ ಕೆಲಸ ಮಾಡುವ ಅವಕಾಶವನ್ನು ಒದಗಿಸಿ ಕೊಟ್ಟಿದೆ.
ಇದನ್ನೂ ಓದಿ : ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ, ದಾಖಲೆ ಪರಿಶೀಲನೆ