ಭಟ್ಕಳ (Bhatkal): ಇಲ್ಲಿನ ಸಾಗರ (Sagar) ರಸ್ತೆಗೆ ತೆರಳುವ ಪಕ್ಕದಲ್ಲಿ ಕಾಂಪಾ ಯೋಜನೆಯಡಿ (CAMPA project) ನಿರ್ಮಿಸಲಾಗಿರುವ ಅರಣ್ಯ ಇಲಾಖೆಯ (Forest Department) ಮುಂಚೂಣಿ ಸಿಬ್ಬಂದಿ ವಸತಿ ಗೃಹ ಸಂಕೀರ್ಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ (Mankal Vaidya) ಮಂಗಳವಾರ ಉದ್ಘಾಟಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನೂತನ ವಸತಿ ಗೃಹ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತ ಮಟ್ಟದಲ್ಲಿಯೂ ಕೂಡ ಇಂತಹ ವಸತಿ ಗೃಹ ನಿರ್ಮಿಸಿ (CAMPA project) ಅರಣ್ಯ ಇಲಾಖೆ ಸಿಬ್ಬಂದಿಗೆ ಕೊಡಬೇಕೆಂದು ನಿರ್ಧಾರ ಮಾಡಿದ್ದೇನೆ.  ಭಟ್ಕಳ ತಾಲೂಕಿನಲ್ಲಿ ನೂರು ಅರಣ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಅನೇಕರು ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಬೆರಳೆಣಿಕೆಯಷ್ಟು ಸಿಬ್ಬಂದಿ ವಸತಿ ಗೃಹದಲ್ಲಿ ವಾಸಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಾಡಿಗೆ ಮನೆಯಲ್ಲಿರುದನ್ನು ನಿಲ್ಲಿಸಿ ಅವರಿಗೆ ಸ್ವಂತ ಆಶ್ರಯ ಕೊಡಬೇಕೆಂದು ನಾವು ತೀರ್ಮಾನ ಮಾಡಿದ್ದೇವೆ ಎಂದರು.

ಇದನ್ನೂ ಓದಿ :  ಶಿರಾಲಿ ಸಹಿತ ೧೫ ಗ್ರಾಪಂಗಳಲ್ಲಿ ಸಂತೆ, ಜಾತ್ರೆ ನಿಷೇಧ

ಈ ಸಂದರ್ಭದಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ (RFO) ವಿಶ್ವನಾಥ ಎ.ವಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಗಿರೀಶ  ಪಿ. ಬೊಕ್ಕಸದ, ಮಂಕಿ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಉಪಸ್ಥಿತರಿದ್ದರು.

ಇದನ್ನೂ ಓದಿ :  ಭಟ್ಕಳ ಸಹಿತ ೭ ತಾಲೂಕುಗಳಲ್ಲಿ ನೋಂದಣಿ ಕೇಂದ್ರ ಸ್ಥಾಪನೆ