ಯಲ್ಲಾಪುರ (Yallapur) : ಗುಡುಗು (Thunder)-ಸಿಡಿಲಿನ (Lightning) ಅಬ್ಬರಕ್ಕೆ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ನಂದೋಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಗೋಡು ಬಾಳೆಗದ್ದೆ ಸಮೀಪದ ಹೆಗ್ಗುಂಬಳಿಯ ಹರೀಶ ಅರ್ಜುನ ಸಿದ್ದಿ (೨೭) ಮೃತ ದುರ್ದೈವಿ. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಇವರು, ಶುಕ್ರವಾರ ಸಂಜೆ ೭.೫೦ರ ಸುಮಾರಿಗೆ ತಮ್ಮ ಮನೆ ಹೊರಭಾಗ ಮೊಬೈಲ್ ನೋಡುತ್ತ ನಿಂತಿದ್ದರು. ಆ ವೇಳೆ ಜೋರಾಗಿ ಗುಡುಗುಸಹಿತ ಮಳೆ ಶುರುವಾಗಿದ್ದು, ಒಮ್ಮೆಲೆ ಅಬ್ಬರಿಸಿದ ಸಿಡಿಲಿನಿಂದ (Lightning) ಅವರು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಹರೀಶ ಸಿದ್ದಿ ಅವರನ್ನು ತಾಯಿ ಮಂಗಲಾ ಸಿದ್ದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ತಪಾಸಣೆ ನಡೆಸಿದ ವೈದ್ಯರು ಹರೀಶ ಸಿದ್ದಿ ಅದಾಗಲೇ ಸಾವನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮುರುಡೇಶ್ವರದಲ್ಲಿ ವೀಲಿಂಗ್ ಮಾಡಿದ ಚಾಲಕನಿಗೆ ದಂಡ