ಭಟ್ಕಳ (Bhatkal) : ಡಿಸೆಂಬರ್ ೧೪ರ ಶನಿವಾರದಂದು ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ದತ್ತ ಜಯಂತಿ (Datta Jayanti) ಉತ್ಸವ ಹಾಗೂ ಶ್ರೀ ಪದ್ಮಾವತಿ ದೇವಿಯ ರಥೋತ್ಸವವು (Rathotsava) ನಡೆಯಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂದು ಮುಂಜಾನೆಯಿಂದ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೪ ಗಂಟೆಗೆ ಪುರಬೀದಿಯಲ್ಲಿ ಪದ್ಮಾವತಿ ದೇವಿಯ ರಥೋತ್ಸವದ ಮೆರವಣಿಗೆ ನಡೆಯಲಿದೆ. ರಥೋತ್ಸವದ (Rathotsava) ಮೆರವಣಿಗೆಯು ದೇವಾಲಯದಿಂದ ಹೊರಟು ರಘುನಾಥ ರಸ್ತೆಯ ಮೂಲಕ ಪುಷ್ಪಾಂಜಲಿ ಚಿತ್ರಮಂದಿರದವರೆಗೆ ತೆರಳಲಿದೆ. ಅಲ್ಲಿಂದ ಹಿಂದಿರುಗಿ ವೀರವಿಠಲ ರಸ್ತೆಯ ವಡೇರಮಠದ ಮಾರ್ಗ, ನಾಡಘರ ದೇವಸ್ಥಾನ ,ನೆಹರು ರಸ್ತೆಯ ಮೂಲಕ ಹೂವಿನ ಚೌಕಕ್ಕೆ ಸಾಗಿ, ಅಲ್ಲಿಂದ ಮುಖ್ಯರಸ್ತೆಯ ಮೂಲಕ ಅರ್ಬನಬ್ಯಾಂಕ ತಲುಪಲಿದೆ. ಅಲ್ಲಿಂದ ಹಿಂದಿರುಗಿ ಕಳಿಹನುಮಂತ ದೇವಸ್ಥಾನ ರಸ್ತೆಯ ಮೂಲಕ ದೇವಾಲಯಕ್ಕೆ ಹಿಂದಿರುಗಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಬೇಕೆಂದು ದೇವಾಲಯದ ಧರ್ಮದರ್ಶಿಗಳು ಕೋರಿದ್ದಾರೆ.

ಇದನ್ನೂ ಓದಿ : Arrest/ ದೇವರನ್ನೇ ಬಿಡದ ಕುಖ್ಯಾತ ಆರೋಪಿತರು ಕಂಬಿ ಹಿಂದೆ