ಭಟ್ಕಳ (Bhatkal) : ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇಲಾಖೆಯ ನೂತನ “ತೆರೆದ ಮನೆ” (Tereda Mane) ಕಾರ್ಯಕ್ರಮ ನಡೆಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾರ್ಯಕ್ರಮದ ಅಂಗವಾಗಿ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಮುಟ್ಟಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಳ್ಳಲಾಯಿತು. ಠಾಣೆಯ ದೈನಂದಿನ ಕರ್ತವ್ಯ,೧೧೨ ಸಹಾಯವಾಣಿ, ಪೋಕ್ಸೋ (pocso) ಕಾಯ್ದೆ ಕುರಿತು ಪೊಲೀಸರು ಮಾಹಿತಿ ನೀಡಿದರು. ಅಪರಿಚಿತ ವಾಹನಗಳು ಡ್ರಾಪ್ ಕೊಡುವುದಾಗಿ ತಿಳಿಸಿದರೆ ಯಾರು ವಾಹನ ಹತ್ತದಂತೆ ಜಾಗೃತಿ ಮೂಡಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ ಸಹಿತ ಹಲವೆಡೆ ಯೆಲ್ಲೋ ಅಲರ್ಟ್
ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗಳ ಎಲ್ಲ ಠಾಣೆಯಲ್ಲಿ “ತೆರೆದ ಮನೆ’ (Tereda Mane) ಎಂಬ ನೂತನ ಕಾರ್ಯಕ್ರಮ ಶುರುವಾಗಿದೆ. ಪೊಲೀಸರೆಂದರೆ ಜನಸಾಮಾನ್ಯರಲ್ಲಿ ಇರುವ ಭಯವನ್ನು ಚಿವುಟಿ ಹಾಕುವ ಮಹತ್ವದ ಕಾರ್ಯಕ್ರಮ ಇದಾಗಿದೆ.
ಇದನ್ನೂ ಓದಿ: ನೀರಲ್ಲಿ ಮುಳುಗಿ ಓರ್ವ ವಿದ್ಯಾರ್ಥಿನಿ ಸಾವು, ಮೂವರು ನಾಪತ್ತೆ