ಭಟ್ಕಳ (Bhatkal) : ಓರ್ವ ಶಿಕ್ಷಕನನ್ನು ಬಲಿ ತೆಗೆದುಕೊಂಡ ಸಿದ್ದಾಪುರದ (Siddapur) ಹೆಜಿನಿ ಬಳಿ ನಡೆದ ಕಾರು ಅಪಘಾತದಲ್ಲಿ (Car Accident) ಗಾಯಗೊಂಡ ಶಿಕ್ಷಕರು ಚೇತರಿಸಿಕೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಿನ್ನೆ ಡಿ.೧೧ರಂದು ಮಧ್ಯಾಹ್ನ ೩ ಗಂಟೆಯ ಸುಮಾರಿಗೆ ಹೊನ್ನಾವರ (Honnavar) -ಬೆಂಗಳೂರು (Bengaluru) ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಬರುವ ಹೆಜಿನಿ ಬಳಿಯ ತಿಂಗಳಗಾರು ಸಮೀಪ ಕಾರು ಅಪಘಾತ (Car Accident) ನಡೆದಿತ್ತು. ವಾಹನದ ಮೇಲೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಎಡಕ್ಕೆ ಚಲಾಯಿಸಿದ ಪರಿಣಾಮ ಹೊಂಡಕ್ಕೆ ಉರುಳಿ ಬಿದ್ದಿತ್ತು. ವಾಹನದಲ್ಲಿದ್ದ ಬೈಲೂರಿನ ಸರ್ಕಾರಿ ಪ್ರೌಢಶಾಲೆಯ ಮಂಜುನಾಥ ಅಣ್ಣಪ್ಪ ದೇವಾಡಿಗ (೫೦) ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಇದನ್ನೂ ಓದಿ: Car Accident/ ಕಾರು ಅಪಘಾತಕ್ಕೀಡಾಗಿ ಶಿಕ್ಷಕ ಸಾವು

ವಾಹನದಲ್ಲಿದ್ದ ಶ್ರೀವಲ್ಲಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸಂಜಯ ದೇವಿದಾಸ ಶೆಟ್ಟಿ (ಗುಡಿಗಾರ) ಅವರ ಬಲಗೈಗೆ ಮತ್ತು ಅಳ್ವೆಕೋಡಿ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಮಹಾದೇವ ಮೊಗೇರ ಅವರಿಗೆ ಗಾಯಗಳಾಗಿದ್ದವು. ಪ್ರಾಥಮಿಕ ಚಿಕಿತ್ಸೆ ಪಡೆದ ಅವರೀರ್ವರು ಮನೆಗೆ ತೆರಳಿದ್ದಾರೆ.

ಇದನ್ನೂ ಓದಿ : Beach tragic/ ಶಿಕ್ಷಕರ ವಿರುದ್ಧ ಪ್ರಕರಣ; ಮುರ್ಡೇಶ್ವರ ಬೀಚ್‌ ಬಂದ್‌

ಅವರ ಎಡಭುಜ ಮತ್ತು ಸೊಂಟಕ್ಕೆ ಪೆಟ್ಟು ತೆಗುಲಿದೆ. ಇನ್ನೋರ್ವ ಶಿಕ್ಷಕ ಚನ್ನವೀರಪ್ಪ ರಾಯಪ್ಪ ಹೊಸಮನಿ ಅವರ ತಲೆ, ಸೊಂಟ ಮತ್ತು ಎಡಗೈಗೆ ಪೆಟ್ಟು ತಗುಲಿದೆ. ಇವರೀರ್ವರನ್ನು ಕುಂದಾಪುರದ (kundapur) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೀರ್ವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರು ಚಲಾಯಿಸುತ್ತಿದ್ದ ಅಂಜುಮನ್‌ (Anjuman) ಪ್ರೌಢಶಾಲೆಯ ಶಿಕ್ಷಕ, ಹೆಬಳೆಯ ಮಹ್ಮದ್‌ ಸಾದಿಕ್‌ ಸರ್ಫುದ್ದೀನ್‌ ಶೇಖ (೫೨) ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯತನದ ಚಾಲನೆ ವಿರುದ್ಧ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಾಗಿದೆ.

ಇದನ್ನೂ ಓದಿ : ಶೇಡಬರಿಯಲ್ಲಿ ದೀಪೋತ್ಸವ ಸಂಪನ್ನ