ಭಟ್ಕಳ (Bhatkal) : ಧಾರವಾಡದ (Dharwad) ಕರ್ನಾಟಕ ವಿಶ್ವವಿದ್ಯಾಲಯವು (Karnataka University) ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಕರಾಟೆ (Karate), ಚೆಸ್ (Chess) ಕ್ರೀಡೆಯಲ್ಲಿ ಆಯ್ಕೆಯಾಗಿ ಯುನಿವರ್ಸಿಟಿ ಬ್ಲೂ ಆಗಿರುವ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ (sports) ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಿ.ಎ ವಿದ್ಯಾರ್ಥಿನಿ ಪೂಜಾ ಖಾರ್ವಿ, ವಿಶಾಖಪಟ್ಟಣಂನ ಗೀತಂ ವಿಶ್ವವಿದ್ಯಾಲಯದಲ್ಲಿ ಜರುಗಿದ ಚೆಸ್ ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ, ಬೋರ್ಡ-೬ ಗೇಮ್‌ನಲ್ಲಿ (Sports) ಬೆಳ್ಳಿ ಪದಕ ಪಡೆದಿದ್ದಾರೆ. ಬಿಬಿಎ ವಿದ್ಯಾರ್ಥಿ ಪ್ರವೀಣ ಹರಿಜನ್, ಭೋಪಾಲನ ಎಲ್.ಎನ್.ಸಿ.ಟಿ. ವಿಶ್ವವಿದ್ಯಾಲಯದಲ್ಲಿ ಜರುಗಿದ ಕರಾಟೆ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕುಮಿಟೆ ೮೪ ಕೆ.ಜಿ. ವಿಭಾಗದಲ್ಲಿ ಅರ್ಹನಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಇದನ್ನೂಓದಿ :  ಡಿಸಿ ವಿರುದ್ಧ ದೂರು ಸಲ್ಲಿಸಿದ ಹೈಕೋರ್ಟ್‌ ವಕೀಲ

ಚೆಸ್ ಯುನಿವರ್ಸಿಟಿ ಬ್ಲೂ ಯಮುನಾ ನಾಯ್ಕ ವಿಶಾಖಪಟ್ಟಣಂ ನ ಗೀತಂ ವಿಶ್ವವಿದ್ಯಾಲಯದಲ್ಲಿ, ಕಬಡ್ಡಿ ಯುನಿವರ್ಸಿಟಿ ಬ್ಲೂ ಸರಸ್ವತಿ ಭಂಡಾರಿ ತಮಿಳುನಾಡಿನ ಕರೈಕುಡಿ ಅಲಗಪ್ಪಾ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ (sports) ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಕರು, ಸಿಬ್ಬಂದಿವರ್ಗ, ಪಾಲಕರು, ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಐವರ ಮೇಲೆ ಹೆಜ್ಜೇನು ದಾಳಿ