ಬೆಂಗಳೂರು (Benglauru) : ೨೦೧೫ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ (barack obama) ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯವು (NIA Court) ಮೂವರು ಶಂಕಿತ ಭಯೋತ್ಪಾದಕರನ್ನು ದೋಷಿ ಎಂದು ತೀರ್ಪು (judgment) ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೂವರು ಅಪರಾಧಿಗಳಾದ ಭಟ್ಕಳದ (Bhatkal) ನಿವಾಸಿಗಳಾದ ಸೈಯದ್ ಇಸ್ಮಾಯಿಲ್ ಅಫಾಕ್ ಲಂಕಾ(೪೪), ಆತನ ಸೋದರ ಸಂಬಂಧಿ, ಎಂಬಿಎ ವಿದ್ಯಾರ್ಥಿಯಾಗಿದ್ದ ಅಬ್ದುಲ್‌ ಸಬೂರ್ (೩೪) ಮತ್ತು ಸ್ಕ್ರ್ಯಾಪ್‌ ಡೀಲರ್‌ ಸದ್ದಾಂ ಹುಸೇನ್ (೪೬) ಅವರು ಒಬಾಮಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಗಣರಾಜ್ಯೋತ್ಸವದಂದು (ಜನವರಿ ೨೬, ೨೦೧೫) ಸ್ಫೋಟಗಳನ್ನು ನಡೆಸಲು ಯೋಜಿಸಿದ್ದರು ಎಂದು ನ್ಯಾಯಾಲಯವು ಮನಗಂಡಿದೆ. ಭಟ್ಕಳದ (Bhatkal) ನಿವಾಸಿಗಳಾದ  ರಿಯಾಜ್ ಅಹ್ಮದ್ ಮತ್ತು ಜೈನುಲ್ಬುದ್ದೀನ್ ಎಂಬ ಇಬ್ಬರು ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ(judgment).

ಇದನ್ನೂ ಓದಿ : “ಅನಾಪಾನಸತಿ ಧ್ಯಾನ” ಏನಿದು ಗೊತ್ತಾ?

ಭಟ್ಕಳದ ನಿವಾಸಿ ಅಫಾಕ್ ಲಂಕಾನನ್ನು ಯುಎಪಿಎ ಸೆಕ್ಷನ್ ೧೩, ೨೦, ೨೩ಮತ್ತು ೩೮ರ ಅಡಿಯಲ್ಲಿ ಹಾಗೂ ಸ್ಫೋಟಕಗಳ ಕಾಯ್ದೆಯ ಸೆಕ್ಷನ್ ೪ ಮತ್ತು 5೫ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ. ಭಟ್ಕಳದ ಮುಖ್ಯ ರಸ್ತೆಯಲ್ಲಿ ಕ್ಲಿನಿಕ್‌ ಹೊಂದಿದ್ದ ಹೋಮಿಯೋಪಥಿಕ್‌ ವೈದ್ಯ ಅಫಾಕ್‌ ಲಂಕಾ ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗಿದ್ದ. ಪಾಕಿಸ್ತಾನಿ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದ. ತನ್ನ ಪತ್ನಿಯನ್ನು ಭೇಟಿ ಮಾಡುವ ನೆಪದಲ್ಲಿ ಆತ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದ ಎಂದು ದೂರಲಾಗಿದೆ. ಮುಂಬೈ, ಪುಣೆ ಮತ್ತು ದೆಹಲಿ ಬಾಂಬ್ ಸ್ಫೋಟಗಳಿಗೆ ಸ್ಫೋಟಕಗಳನ್ನು ಪೂರೈಸುವಲ್ಲಿ ಈತ ಭಾಗಿಯಾಗಿದ್ದ ಎಂಬ ಆರೋಪವಿದೆ.

ಇದನ್ನೂ ಓದಿ : ಚಿನ್ನ ಸಾಗಿಸುತ್ತಿದ್ದ ಹೊನ್ನಾವರ ವ್ಯಕ್ತಿ ಬಂಧನ

ಭಟ್ಕಳದ ನಿವಾಸಿ ಅಬ್ದುಲ್‌ ಸಬೂರ್ ಮತ್ತು ಹುಸೇನ್ ಅವರನ್ನು ಯುಎಪಿಎ ಸೆಕ್ಷನ್ ೧೩ ಮತ್ತು ೨೩ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ ೪ ಮತ್ತು ೫ರ ಅಡಿಯಲ್ಲಿ ದೋಷಿ ಎಂದು ಘೋಷಿಸಲಾಗಿದೆ. ವಿಶೇಷ ಎನ್‌ಐಎ ನ್ಯಾಯಾಲಯದ ಪ್ರಕಾರ, ಪ್ರಮುಖ ಆರೋಪಿಗಳಾದ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾರೆ.

ಏನಿದು ಪ್ರಕರಣ ?

ತಮಿಳುನಾಡಿನ ಚರ್ಚ್‌ ಸ್ಟ್ರೀಟ್‌ನಲ್ಲಿ ೨೦೧೪ರ ಡಿ.೩೦ರಂದು ನಡೆದ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನವರಿ ೮, ೨೦೧೫ರಂದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತಂಡವು ಬೆಂಗಳೂರಿನ ಪುಲಕೇಶಿನಗರ ಪ್ರದೇಶದಲ್ಲಿ ಅಫಾಕ್ ಲಂಕಾನನ್ನು ಬಂಧಿಸಿದಾಗ ಒಬಾಮಾ ಭೇಟಿ ಸಂದರ್ಭ ಭಯೋತ್ಪಾದನಾ ಸಂಚು ರೂಪಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆತನ ವಿಚಾರಣೆಯಿಂದ ಇತರ ಶಂಕಿತ ಭಯೋತ್ಪಾದಕರ ಬಂಧನಕ್ಕೆ ಕಾರಣವಾಯಿತು. ಭಟ್ಕಳದ ಮನೆಯೊಂದರಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದಾಗಿ ಅಫಾಕ್‌ ಲಂಕಾ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದರು. ನಂತರ ಸಿಸಿಬಿ ತಂಡವು ಸ್ಥಳದಿಂದ ಬಾಂಬ್‌ಗಳು ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.

ಇದನ್ನೂ ಓದಿ : ೩ ಕೋ.ರೂ. ಡಿಮಾಂಡ್‌ ಇಟ್ಟಿದ್ದ ಉ.ಕ. ಮೂಲದ ಐಆರ್‌ಬಿಎನ್‌ ಕಾನ್‌ಸ್ಟೇಬಲ್‌

ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಸಿಸಿಬಿಯ ಎಸಿಪಿ ಓಂಕಾರಯ್ಯ ಮತ್ತು ತಮ್ಮಯ್ಯ ನೇತೃತ್ವದಲ್ಲಿ ನಡೆದಿತ್ತು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣವನ್ನು ಕೈಗೆತ್ತಿಕೊಂಡು ೨೦೦೦ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆರೋಪಿಗಳು ೨೦೧೫ರಿಂದ ಪರಪ್ಪನ ಅಗ್ರಹಾರ (Parappana Agrahar) ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಇದನ್ನೂ ಓದಿ : ೩ ಕೋ.ರೂ. ಡಿಮಾಂಡ್‌ ಇಟ್ಟಿದ್ದ ಉ.ಕ. ಮೂಲದ ಐಆರ್‌ಬಿಎನ್‌ ಕಾನ್‌ಸ್ಟೇಬಲ್‌

ಇನ್ನಿಬ್ಬರು ಆರೋಪಿಗಳಾದ ಭಟ್ಕಳದ ರಿಯಾಜ್‌ ಅಹ್ಮದ್ ಮತ್ತು ಜೈನುಲ್ಬುದ್ದೀನ್ ಅವರನ್ನು ಯುಎಪಿಎ ಸೆಕ್ಷನ್ ೧೩ ಮತ್ತು ೨೩ ಮತ್ತು ಸ್ಫೋಟಕಗಳ ಕಾಯ್ದೆಯ ಸೆಕ್ಷನ್ ೪ ಮತ್ತು ೫ ರ ಅಡಿಯಲ್ಲಿ ಖುಲಾಸೆಗೊಳಿಸಲಾಗಿದೆ.  ಆದಾಗ್ಯೂ, ಮುಂಬೈನಲ್ಲಿ ಜೈನುಲ್ಬುದ್ದೀನ್ ವಿರುದ್ಧ ಒಂದು ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕಾರವಾರದ ದಂಪತಿಗೆ ೫ ಲ.ರೂ.ಗೆ ಮಗು ಮಾರಾಟ