ಖ್ಯಾತ ಪರಿಸರಪ್ರೇಮಿ ಮತ್ತು “ಬರಿಗಾಲಿನ ಪರಿಸರಶಾಸ್ತ್ರಜ್ಞೆ” ತುಳಸಿ ಗೌಡ (Tulsi Gowda) ಅವರು ತಮ್ಮ ಅಪ್ರತಿಮ ಸಸ್ಯ ಜ್ಞಾನದಿಂದ “ಕಾಡುಗಳ ವಿಶ್ವಕೋಶ” ಎಂಬ ಬಿರುದನ್ನು ಗಳಿಸಿದರು, ಅವರು ತಮ್ಮ 86 ನೇ ವಯಸ್ಸಿನಲ್ಲಿ ಕರ್ನಾಟಕದ ಉತ್ತರ ಕನ್ನಡ (uttara kannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಹೊನ್ನಾಳಿ ಗ್ರಾಮದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಪ್ರಧಾನಮಂತ್ರಿ (Prime Minister) ನರೇಂದ್ರ ಮೋದಿ (Narendra Modi) ಸಹಿತ ಗಣ್ಯಾತಿಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.  ವೃಕ್ಷಮಾತೆ ತುಳಸಿಗೌಡರ ಜೀವನದ ಅದ್ಭುತ ಪಯಣವನ್ನು ಇಲ್ಲಿ ದಾಖಲಿಸುವ ಮೂಲಕ “ಭಟ್ಕಳ ಡೈರಿ” ಅವರಿಗೆ ನುಡಿನಮನ ಸಲ್ಲಿಸುತ್ತಿದೆ.

“ತುಳಸಿ ಅಜ್ಜಿ” ಎಂದು ಪ್ರೀತಿಯಿಂದ ಕರೆಯಲ್ಪಡುವ  ತುಳಸಿ ಗೌಡ (Tulsi Gowda), ತಮ್ಮ ತಾಯಿ ಸರ್ಕಾರಿ ನರ್ಸರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಚಿಕ್ಕ ಹುಡುಗಿಯಾಗಿದ್ದಾಗಿನಿಂದ ನೂರಾರು ಸಾವಿರ ಸಸಿಗಳನ್ನು ಪೋಷಿಸಿದ್ದರು. ಅವರು ನರ್ಸರಿಯಲ್ಲಿ ೩೫ ವರ್ಷಗಳ ಕಾಲ ದಿನಗೂಲಿ ಕೆಲಸಗಾರರಾಗಿ ಕೆಲಸ ಮಾಡಿದ್ದಾರೆ. ನಂತರದ ದಿನಗಳಲ್ಲಿ ಅವರು ಗಿಡಗಳ ಸಂರಕ್ಷಣೆಗಾಗಿ ಅವರು ಮಾಡಿದ ಕೆಲಸವನ್ನು ಗುರುತಿಸಿ ಕಾಯಂ ಕೆಲಸ ನೀಡಲಾಗಿತ್ತು. ಅವರು ೨೦೦೮ರಲ್ಲಿ ೭೦ನೇ ವಯಸ್ಸಿನಲ್ಲಿ ನಿವೃತ್ತರಾದರು.  ದಾರಿಯುದ್ದಕ್ಕೂ, ತಮ್ಮ ಸಾಂಪ್ರದಾಯಿಕ ನೆಲದ ಜ್ಞಾನದಿಂದ ಅರಣ್ಯ ಇಲಾಖೆಯ ಅರಣ್ಯೀಕರಣದ ಪ್ರಯತ್ನಗಳಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದವರು ತುಳಸಿ ಗೌಡರು. ಯಾವುದೇ ಮರವನ್ನು ಗುರುತಿಸುವ, ಅದರ ಆಯಸ್ಸು ತಿಳಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕರ್ನಾಟಕದ ಹಾಲಕ್ಕಿ ಒಕ್ಕಲು ಬುಡಕಟ್ಟು ಜನಾಂಗದಲ್ಲಿ ಜನಿಸಿದ ತುಳಸಿ ಗೌಡ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವರು. ಅವರು ಎಡ್ಮೂಮೂರು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೦ ರಿಂದ ೧೨ನೇ ವಯಸ್ಸಿನಲ್ಲಿ ಅವರಿಗೆ ಮದುವೆಯಾಯಿತು. ಆದರೆ ಗಂಡ ಕೂಡ ಹೆಚ್ಚು ಸಮಯ ಬದುಕುಳಿಯಲಿಲ್ಲ.  ಆ ಸಮಯದಲ್ಲಿ ನೈಸರ್ಗಿಕ ಪ್ರಪಂಚದೊಂದಿಗಿನ ಅವರ ಸಂಪರ್ಕವು ಹೆಚ್ಚಾಯಿತು.  ಔಪಚಾರಿಕ ಜ್ಞಾನದ ಕೊರತೆಯ ಹೊರತಾಗಿಯೂ ಅವರು ಸ್ವಯಂಪ್ರೇರಿತರಾಗಿ ಸಸಿಗಳನ್ನು ನೆಡಲು ಪ್ರಾರಂಭಿಸಿದರು.  ಪರಿಸರ ವ್ಯವಸ್ಥೆ, ಕಾಡುಗಳು ಮತ್ತು ಮರಗಳ ಬೆಳವಣಿಗೆಯ ಮಾದರಿಗಳ ಬಗ್ಗೆ ತನ್ನ ಸ್ವಂತ ಇಚ್ಛೆಯಂತೆ ಜ್ಞಾನವನ್ನು ಪಡೆದರು.  ೬೦ ವರ್ಷಗಳ ಅವಧಿಯಲ್ಲಿ, ಅವರು ಲೆಕ್ಕವೇ ಇಲ್ಲದಷ್ಟು ಅನೇಕ ಮರಗಳನ್ನು ನೆಟ್ಟರು.  ಅವರ ಮಾತಿನಲ್ಲಿ ಹೇಳುವುದಾದರೆ, ಅಂಕಿ ಸಂಖ್ಯೆಗಳು “ಲಕ್ಷಗಳು, ಬಹುಶಃ ಕೋಟಿಗಳು”.

ಇದನ್ನೂ ಓದಿ : ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಇನ್ನಿಲ್ಲ

ಮರಗಳು ಮತ್ತು ಕಾಡುಗಳ ಬಗ್ಗೆ ತುಳಸಿ ಗೌಡರು ಅಪಾರವಾದ ಜ್ಞಾನದ ಸಂಪತ್ತು ಹೊಂದಿದ್ದರು.  ತಾಯಿ ಮರದಿಂದ ಬೀಜಗಳಿಂದ ಪುನರುತ್ಪಾದನೆಯ ಕುರಿತು ಉತ್ತಮ ಜ್ಞಾನ ಹೊಂದಿದ್ದರು.  ಹೂವು ಮತ್ತು ಬೀಜಗಳ ಮೊಳಕೆಯೊಡೆಯುವ ಸಮಯ ಮತ್ತು ಸಸ್ಯದ ತಾಯಿಯ ಮರದಿಂದ ಅವುಗಳನ್ನು ಸರಿಯಾದ ಸಮಯದಲ್ಲಿ ಸಂಗ್ರಹಿಸುವ ಗೌಡರ ಚಾಕಚಕ್ಯತೆ ಶ್ಲಾಘನೀಯವಾದದ್ದು.  ಇಂದಿನ ಜನರು ಸಸ್ಯದ ಕುರಿತು ಅಜ್ಞಾನದಿಂದ ಬಳಲುತ್ತಿರುವಾಗ ತುಳಸಿ ಗೌಡರ ಆಳವಾದ ಜ್ಞಾನ ಬೆರುಗುಮೂಡಿಸುತ್ತದೆ. ತುಳಸಿ ಗೌಡರು ೩೦೦ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ಗುರುತಿಸಬಲ್ಲವರಾಗಿದ್ದರು.  ಅವರು ರೋಗಗಳನ್ನು ತಡೆಗಟ್ಟಲು ಹೆಚ್ಚಾಗಿ ಬಳಸುವ ಔಷಧೀಯ ಸಸ್ಯಗಳ ಬಗ್ಗೆ ಅರಿವು ಹೊಂದಿದ್ದರು. ಈ ಜ್ಞಾನ ಅವರ ಸಮುದಾಯದ ತಲೆಮಾರುಗಳಿಂದ ಬಳುವಳಿಯಾಗಿ ಬಂದಿದ್ದು ಎಂತಲೂ ಹೇಳಬಹುದು.ʼ

ಇದನ್ನೂ ಓದಿ :   ಪೊಲೀಸರ ಮರೆಹೋದವನ ಮೇಲೆಯೇ ಬಿತ್ತು ಕೇಸ್; ಯಾಕೆ ಗೊತ್ತಾ?

ಪರಿಸರ ಕ್ಷೇತ್ರದಲ್ಲಿ ಅಜರಾಮರ ಹೆಸರು : ೨೦೨೧ರಲ್ಲಿ ತುಳಸಿ ಗೌಡರು ಪದ್ಮಶ್ರೀ  ಪ್ರಶಸ್ತಿಯೊಂದಿಗೆ ಪುರಸ್ಕರಿಸಲ್ಪಟ್ಟಿದ್ದಾರೆ. ಪ್ರಕೃತಿ ಸಂರಕ್ಷಣೆಯಲ್ಲಿನ ಪ್ರವರ್ತಕ ಕೆಲಸಕ್ಕಾಗಿ ಅವರಿಗೆ ಹಲವಾರು ಪುರಸ್ಕಾರಗಳು ಅರಸಿ ಬಂದಿವೆ.  ೧೯೮೬ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ೧೯೯೯ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ೨೦೨೩ರಲ್ಲಿ ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯವು (Agriculture University) ಅವರಿಗೆ ಗೌರವ ಡಾಕ್ಟರೇಟ್ (Doctorate) ನೀಡಿದೆ.

ವಿಡಿಯೋ ಸಹಿತ ಇದನ್ನೂ ಓದಿ :   ಪ್ರವಾಸಕ್ಕೆಂದು ಬಂದಿದ್ದ ಬಾಲಕ ಬಾವಿಗೆ ಬಿದ್ದು ಸಾವು

ತುಳಸಿ ಗೌಡರು ಸಮುದಾಯದ ಗೌರವಾನ್ವಿತ ಸದಸ್ಯರಾಗಿದ್ದರು. ಬುದ್ಧಿವಂತಿಕೆ ಮತ್ತು ಸಮರ್ಪಣೆಯ ದಾರಿದೀಪವಾಗಿದ್ದರು. ಆದರೆ ಈ ಎಲ್ಲ ಸಾಧನೆಗಳ ಹೊರತಾಗಿಯೂ ಅವರು ವಿನಮೃತೆಯನ್ನು ಮೈಗೂಡಿಸಿಕೊಂಡಿದ್ದರು.  ಕೊನೆಯವರೆಗೂ ತನ್ನ ಉದ್ದೇಶಕ್ಕಾಗಿ ದಣಿವರಿಯಿಲ್ಲದೆ ಶ್ರಮಿಸಿದ ವೃಕ್ಷ ಮಾತೆ.  ಒಬ್ಬ ವ್ಯಕ್ತಿಯ ಉತ್ಸಾಹ ಮತ್ತು ಸಮರ್ಪಣಾ ಮನೋಭಾವವು ಪರಿಸರದ ಮೇಲೆ ಹೇಗೆ ಭಾರಿ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಿದ ಮಹಾತಾಯಿ.

ಇದನ್ನೂ ಓದಿ :  ಮದ್ಯ ಸೇವಿಸಿ ಬೈಕ್ ಚಲಾಯಿಸಿದ್ದಕ್ಕೆ ದಂಡ

ಯಾವುದೇ ಔಪಚಾರಿಕ ಶಿಕ್ಷಣವನ್ನು ಹೊಂದಿಲ್ಲದಿದ್ದರೂ ಸಹ, ಸಸ್ಯಗಳು ಮತ್ತು ಕಾಡುಗಳ ಬಗ್ಗೆ ಅವರ ಬುದ್ಧಿವಂತಿಕೆಯು ಹೆಚ್ಚು ತರಬೇತಿ ಪಡೆದ ಪರಿಸರವಾದಿಗಳನ್ನು ಸಹ ಮೀರಿಸುವಂಥದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಪರಿಸರ ಜ್ಞಾನ, ಅವರ ಮಾದರಿ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಮುಟ್ಟಿಸುವಂತಹ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ, ಸಂಘಟನೆಗಳು ಶಾಶ್ವತವಾದ ಯೋಜನೆ ಹಾಕುವಂತಾಗಲಿ ಎಂಬುದೇ “ಭಟ್ಕಳ ಡೈರಿ”ಯ ಆಶಯ.

ಇದನ್ನೂ ಓದಿ : KSRTC/ ಡಿ.೩೧ರಿಂದ ಅನಿರ್ದಿಷ್ಟಾವಧಿ ಬಸ್ ಮುಷ್ಕರ