ಭಟ್ಕಳ (Bhatkal) : ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ (bike accident) ಸಂಭವಿಸಿ ಇಬ್ಬರೂ ಸವಾರರು ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಜಾಲಿ ನಿವಾಸಿ ರವೀಂದ್ರ ಶಂಕರ ಆಚಾರಿ (೫೨) ಮತ್ತು ಕೇರಳದ (Kerala) ಕಾಸರಕೋಡ (Kasarkod) ನಿವಾಸಿ ಅಹ್ಮದ್‌ ಜಿಕ್ರಿಯಾ ಅಬ್ದುಲ್ಲಾ (೩೦) ಗಾಯಗೊಂಡವರು. ಇವರು ಶಿರಾಲಿ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ಇಬ್ಬರೂ ಗಾಯಗೊಂಡಿದ್ದಾರೆ. ಡಿ.೧೯ರಂದು ಸಂಜೆ ೬.೪೫ರ ಸುಮಾರಿಗೆ ಘಟನೆ ನಡೆದಿದೆ.  ಅಹ್ಮದ್‌ ಜಿಕ್ರಿಯಾ ವಿರುದ್ಧ ರವೀಂದ್ರ ಆಚಾರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು (Complaint)  ದಾಖಲಿಸಿದ್ದಾರೆ.

ಇದನ್ನೂ ಓದಿ : ಶೈಕ್ಷಣಿಕ ಪ್ರವಾಸಕ್ಕೆ ಬಂದ ಶಾಲಾ ಬಸ್‌ ಪಲ್ಟಿ