ಕಾರವಾರ (Karwar) : ಕರ್ನಾಟಕ ಮಾಧ್ಯಮ ಅಕಾಡೆಮಿಯ ೨೦೨೪ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ (Media Academy Award) ನ್ಯೂಸ್ ಫಸ್ಟ್ (News First) ಉತ್ತರ ಕನ್ನಡ (Uttara Kannada) ಜಿಲ್ಲಾ ವರದಿಗಾರ ಹಾಗೂ ನುಡಿಜೇನು (Nudijenu) ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಸಂದೀಪ ಸಾಗರ ಭಾಜನರಾಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂದೀಪ ಸಾಗರ ಮೂಲತಃ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ತಾಲೂಕಿನವರಾಗಿದ್ದು ಉತ್ತರ ಕನ್ನಡ ಜಿಲ್ಲೆಗೆ ಟಿವಿ೯ (TV9) ಸುದ್ದಿ ಸಂಸ್ಥೆಯ ಜಿಲ್ಲಾ ವರದಿಗಾರರಾಗಿ ೨೦೧೨ಕ್ಕೆ ಬಂದಿದ್ದರು. ೨೦೨೦ರಿಂದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂದೀಪ ಸಾಗರ ಅವರ ಪತ್ನಿ ಲಾವಣ್ಯ ಸಾಗರ ಮಾಲಿಕತ್ವದಲ್ಲಿ ೨೦೧೯ರಲ್ಲಿ ನುಡಿಜೇನು ದಿನಪತ್ರಿಕೆಯಾಗಿ ಪ್ರಾರಂಭವಾಗಿದ್ದು, ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸಂದೀಪ ಸಾಗರ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ (Media Academy Award) ಲಭಿಸಿರುವುದಕ್ಕೆ ಜಿಲ್ಲೆಯ ಪತ್ರಕರ್ತರು, ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : Bus fares/ ರಾಜ್ಯದ ಜನತೆಗೆ ಬಿಗ್ ಶಾಕ್
Congratulations