ಭಟ್ಕಳ (Bhatkal) : ಭಾರತ ತಂಡದ (India Team) ಕ್ರಿಕೆಟ್ ಆಟಗಾರ (Cricket player) ಮನೀಶ್ ಪಾಂಡೆ (Manish Pande)ತಮ್ಮ ಕುಟುಂಬ ಸಮೇತ ಮುರುಡೇಶ್ವರಕ್ಕೆ (Murdeshwar) ಭೇಟಿ ನೀಡಿ ನೇತ್ರಾಣಿ ದ್ವೀಪದಲ್ಲಿ (Netrani Island) ಸ್ಕೂಬಾ ಡೈವಿಂಗ್ (scuba diving) ಮಾಡುವ ಮೂಲಕ ಕಡಲಾಳದಲ್ಲಿನ ಜೀವರಾಶಿಯನ್ನು ಕಣ್ತುಂಬಿಕೊಂಡರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಮುರುಡೇಶ್ವರ (Murudeshwar) ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ದಿಯಾದಷ್ಟೇ ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾಗಿದೆ. ಇಲ್ಲಿನ ನೇತ್ರಾಣಿ ದ್ವೀಪದಲ್ಲಿ ಕಳೆದ ಕೆಲ ತಿಂಗಳ ಹಿಂದಷ್ಟೇ ಮತ್ತೆ ಸ್ಕೂಬಾ ಡೈವಿಂಗ್ ಆರಂಭವಾಗಿದೆ. ಇತ್ತೀಚೆಗಷ್ಟೇ ನಟ ಡಾಲಿ ಧನಂಜಯ (Dolly Dhanajay) ಸ್ಕೂಬಾ ಡೈವಿಂಗ್‌ ಮಾಡಿದ್ದರು.  ಅದೇ ರೀತಿ ಭಾರತ ತಂಡದ ಕರ್ನಾಟಕದ (Karnataka) ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ (Manish Pande) ತಮ್ಮ ತಂದೆ-ತಾಯಿ ಸಹಿತ ೫ ಜನರ ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ಭೇಟಿ ನೀಡಿದ್ದರು.  ಕುಟುಂಬ ಸಮೇತರಾಗಿ  ಮುರುಡೇಶ್ವರ ದೇವರ ದರ್ಶನ ಪಡೆದ ಬಳಿಕ  ಬೋಟ್ ನಲ್ಲಿ ತೆರಳಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಕಡಲಾಳದಲ್ಲಿನ ಜೀವರಾಶಿಯನ್ನು ಕಣ್ತುಂಬಿಕೊಂಡರು.

ವಿಡಿಯೋ ಸಹಿತ ಇದನ್ನೂ ಓದಿ :  ಸ್ಕೂಬಾ ಡೈವಿಂಗ್‌ ಮಾಡಿದ ನಟ ಡಾಲಿ ಧನಂಜಯ್‌