ಶಿವಮೊಗ್ಗ: ಪತಿಯಿಂದಲೇ ಪತ್ನಿ-ಮಗುವಿಗೆ ವಿಷ ಕುಡಿಸಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್  ಠಾಣೆ ವ್ಯಾಪ್ತಿಯ ಸಿದ್ಲಿಪುರದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯು ಸಾವನ್ನಪ್ಪಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.

ಇದನ್ನೂ ಓದಿ : ಜೋಕಾಲಿ ಆಡುವಾಗ ಕೊರಳಿಗೆ ಹಗ್ಗ ಸುತ್ತಿಕೊಂಡು ಬಾಲಕ ಸಾವು

ದಂಪತಿ ನಡುವೆ ಮೊದಲಿನಿಂದಲೂ ಕಲಹ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಗಂಡಿನ ಕಡೆಯವರು ವರದಕ್ಷಿಣೆ ಹಣಕ್ಕಾಗಿ ಹಲವು ಸಲ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಹಿಂದೊಮ್ಮೆ ಮಹಿಳಾ ಪೊಲೀಸ್ ಸ್ಟೇಷನ್​ನಲ್ಲಿಯೂ ದೂರು ಕೊಡಲಾಗಿತ್ತು. ದೂರು ಕೊಟ್ಟ ಬಳಿಕವೂ ಮಹಿಳೆಯ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ನಡುವೆ ಮಹಿಳೆಗೆ ಹುಟ್ಟಿದ ಮಗು ಸೀಳುತುಟಿಯಿಂದ ಕೂಡಿದ್ದರಿಂದ ಗಂಡಿನ ಮನೆಯವರು ಇನ್ನಷ್ಟು ಹಿಂಸೆ ನೀಡಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ. ವಿಪರೀತ ಹಿಂಸೆಗಳ ನಡುವೆ ನಿನ್ನೆ ಇದ್ದಕ್ಕಿದ್ದ ಹಾಗೆ ಮಹಿಳೆಯನ್ನು ಹಾಗೂ ಮಗುವನ್ನ ಪತಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಅಷ್ಟೊತ್ತಿಗೆ ಮಹಿಳೆ ಸಾವನ್ನಪ್ಪಿದ್ದಾಳೆ. ಮಗು ಸ್ಥಿತಿ ಚಿಂತಾಜನಕವಾಗಿದೆ. ಇನ್ನೊಂದು ಮಗುವಿನ ಕುರುಹು ಪತ್ತೆಯಾಗಿಲ್ಲ. ಪತಿಯಿಂದಲೇ ಪತ್ನಿ-ಮಗುವಿಗೆ ವಿಷ ಉಣಿಸಲಾಗಿದೆ ಎಂದು ಮಹಿಳೆಯ ಫೋಷಕರು ದೂರು ನೀಡಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ವಿಡಿಯೋ ನೋಡಿ : ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಡಿಕೆಶಿ ಭಾಷಣ https://fb.watch/qpNNHAUJtx/?mibextid=Nif5oz