ಭಟ್ಕಳ (Bhatkal) : ತಾಲೂಕು ಆಡಳಿತ, ತಾಲೂಕು ಪಂಚಾಯತ, ಭಟ್ಕಳ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೬ನೇ ವರ್ಷದ ಗಣರಾಜ್ಯೋತ್ಸವದ (Republic Day) ಧ್ವಜಾರೋಹಣವನ್ನು ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ನೆರವೇರಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಈ ವರ್ಷ ನಾವೆಲ್ಲರೂ ೭೬ನೇ ಗಣರಾಜ್ಯೋತ್ಸವವನ್ನು (Republic Day) ಆಚರಣೆ ಮಾಡುತ್ತಿದ್ದೇವೆ. ಭಾರತ ಗಣರಾಜ್ಯ ರಾಷ್ಟ್ರವಾಗಲು, ಸಂವಿಧಾನ ಜಾರಿಗೆ ತರಲು ಶ್ರಮಿಸಿದ ಎಲ್ಲರನ್ನೂ ಸಹ ನೆನೆಯುವ ದಿನ. ಪುಜಾಪ್ರಭುತ್ವಕ್ಕೆ ಇನ್ನೊಂದು ಹೆಸರೇ ಭಾರತ ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶ ನಮ್ಮ ಭಾರತ ಎಂಬುದು ನಮಗೆ ಹೆಮ್ಮೆ.ಈ ಸಂವಿಧಾನ ಕೇವಲ ದಾಖಲೆಯಲ್ಲ; ಇದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮವಾಗಿದೆ ಎಂದರು.
ಇದನ್ನೂ ಓದಿ : Three Arrest/ ಭಟ್ಕಳದ ಓರ್ವ ಸಹಿತ ಮೂವರ ಬಂಧನ
ಇದಕ್ಕೂ ಪೂರ್ವದಲ್ಲಿ ಪೊಲೀಸ ಇಲಾಖೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಪಥ ಸಂಚಲನದಲ್ಲಿ ಪಾಲ್ಗೊಂಡವರಿಗೆ ಪ್ರಥಮ , ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ನಿವೃತ್ತ ಸೈನಿಕರು ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಕೂಡ ಈ ವೇಳೆ ಗೌರವಿಸಿ ಸನ್ಮಾನಿಸಲಾಯಿತು. ಕೊನೆಯಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ : Kumbh Mela/ ಪ್ರಯಾಗರಾಜ್‌ಗೆ ತೆರಳಿದ ಕಾಸ್ಮುಡಿ ಕುಟುಂಬ