ಭಟ್ಕಳ (Bhatkal) : ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನ (Cleanliness Day) ಆಚರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ (Cleanliness Day) ಚಾಲನೆ ನೀಡಿದ ಹಿರಿಯ ಶ್ರೇಣಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. (JMFC) ನ್ಯಾಯಾಧೀಶ ಕಾಂತ ಕುರಣಿ, ಸ್ವಚ್ಛತೆಯ ಮಹತ್ವವನ್ನು ತಿಳಿಸಿದರು. ಪ್ರತಿಯೋರ್ವರೂ ಪ್ರಥಮ ಆದ್ಯತೆಯನ್ನು ತಮ್ಮ ತಮ್ಮ ಪರಿಸರ ಸ್ವಚ್ಛತೆಗೆ ನೀಡುವಂತೆ ಅವರು ಕರೆ ನೀಡಿದರು.
ಇದನ್ನೂ ಓದಿ : Idol / ಇಡಗುಂಜಿಯಿಂದ ಕಾಶಿಗೆ ಅನ್ನಪೂರ್ಣೇಶ್ವರಿ ವಿಗ್ರಹ
ಈ ಸಂದರ್ಭದಲ್ಲಿ ಪ್ರಥಮ ದರ್ಜೆಯ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಧನವತಿ, ಸಹಾಯಕ ಸರಕಾರಿ ಅಭಿಯೋಜಕರಾದ ವಿವೇಕ ನಾಯ್ಕ, ಶೇಖರ ಹರಿಕಾಂತ, ವಕೀಲರ ಕಾರ್ಯದರ್ಶಿ ನಾಗರಾಜ ನಾಯ್ಕ, ವಕೀಲರಾದ ವಿ.ಎಫ್.ಗೋಮ್ಸ, ಎಸ್.ಜೆ. ನಾಯ್ಕ, ನಾರಾಯಣ ಯಾಜಿ, ಮಹೇಶ ಆರ್. ನಾಯ್ಕ, ಆರ್.ಜಿ.ನಾಯ್ಕ, ವಿ.ಆರ್. ಸರಾಫ, ಗಣೇಶ ದೇವಾಡಿಗ, ರವೀಂದ್ರ, ದಾಮೋದರ ನಾಯ್ಕ, ಗಣೇಶ ಮುರ್ಡೇಶ್ವರ, ನ್ಯಾಯಾಲಯ ಸಿಬ್ಬಂದಿ, ಪುರಸಭೆಯ ಕಾರ್ಮಿಕರು ಮುಂತಾದವರಿದ್ದರು.
ಇದನ್ನೂ ಓದಿ : Bike Accident/ ಬೈಕ್ ಡಿಕ್ಕಿಯಾಗಿ ಮಹಿಳೆಗೆ ಗಾಯ