ಶಿವಮೊಗ್ಗ : ಕೆಎಫ್ಡಿ ಪಾಸಿಟಿವ್ ಹೊಂದಿದ್ದ ಮಹಿಳೆಯೋರ್ವಳು ನಿನ್ನೆ ರಾತ್ರಿ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೋರ್ಲಕೈ ಗ್ರಾಮದ ನಿವಾಸಿ ನಾಗಮ್ಮ ಸುಬ್ಬ ಮಡಿವಾಳ( 57) ನಿನ್ನೆ ರಾತ್ರಿ 8.20ಕ್ಕೆ ಮರಣ ಹೊಂದಿದ್ದಾರೆ.
ಇದನ್ನೂ ಓದಿ : ವಿಷ್ಣು ನಾಯ್ಕ ಗರಡಿಯಲ್ಲಿ ಬೆಳೆದ ಸಾಹಿತಿ ಎಂಬ ಹೆಮ್ಮೆ : ಡಾ.ಜಮೀರುಲ್ಲ ಷರೀಫ್
ಜ.28 ರಂದು ಆಶಾ ಕಾರ್ಯಕರ್ತೆ ಮನೆ ಭೇಟಿ ಸಂದರ್ಭದಲ್ಲಿ ನಾಗಮ್ಮ ಇವರಿಗೆ ಕೆಮ್ಮು ಮತ್ತು ಜ್ವರ ಇರುವುದು ಗೊತ್ತಾಗಿ ಕಫ ಪರೀಕ್ಷೆಗೆ ನೀಡಲು ಹಾಗೂ ಆಸ್ಪತ್ರೆಗೆ ಹೋಗಲು ತಿಳಿಸಲಾಗಿತ್ತು. ಆದರೆ ಮಹಿಳೆ ನಾಗಮ್ಮ ತಾನು ಆರಮಾಗಿ ಇರುವುದಾಗಿ ಹೇಳಿದ್ದರು. ತದನಂತರ ಮಹಿಳೆ ಜ.29 ರಂದು ಸಾಗರದ ಭಾಗವತ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರು. ಜ.30 ರಂದು ಮನೆ ಭೇಟಿ ಸಮಯದಲ್ಲಿ ಅವರಿಗೆ ಜ್ವರ ಇರುವ ಕಾರಣ ಸಮುದಾಯ ಆರೋಗ್ಯಾಧಿಕಾರಿಗಳು ರಕ್ತದ ಮಾದರಿಯನ್ನು ತೆಗೆದುಕೊಂಡು ಪರೀಕ್ಷೆ ನಡೆಸಿದ್ದರು. ಫೆ.1 ರಂದು ಕೆಎಫ್ಡಿ ಆರ್ಟಿಪಿಸಿಆರ್ ಪಾಸಿಟಿವ್ ಎಂದು ವಿಡಿಎಲ್ ಶಿವಮೊಗ್ಗದಿಂದ ವರದಿ ಬಂದಿತ್ತು.
ಈ ವಿಡಿಯೋ ನೋಡಿ : https://fb.watch/qsdBqgXC5t/?mibextid=Nif5oz
ಫೆ.2 ರಂದು ರೋಗಿಯನ್ನು ಸಿದ್ದಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚೇತರಿಕೆಯಾಗದ ಕಾರಣ ಅವರನ್ನು ಫೆ.3 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿಯೂ ಚೇತರಿಕೆ ಆಗದ ಕಾರಣ ಕೆಎಂಸಿ ಮಣಿಪಾಲಕ್ಕೆ ಫೆ.4 ರಂದು ಕೆಎಂಸಿ ಮಣಿಪಾಲಕ್ಕೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ್ ಫೆ.5 ರಂದು ಮರು ರಕ್ತ ಪರೀಕ್ಷೆ ಮಾಡಲಾಗಿತ್ತು. ಫೆ.06 ರಂದು ಕೆಎಫ್ಡಿ ಪಾಸಿಟಿವ್ ವರದಿ ಬಂದಿತ್ತು.
ಫೆ.24 ರಂದು ವೈದ್ಯರ ಸಲಹೆ ವಿರುದ್ದವಾಗಿ ಕೆಎಂಸಿ ಆಸ್ಪತ್ರೆಯಿಂದ ಮಧ್ಯಾಹ್ನ 3.30 ಕ್ಕೆ ನಾಗಮ್ಮ ಬಿಡುಗಡೆ ಹೊಂದಿದ್ದಳು.
ಆರೋಗ್ಯ ಇಲಾಖೆಯವರು ಮನವೊಲಿಸಿ ಫೆ.24 ರಂದು ಸಂಜೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಅವರು ಫೆ.25 ರ ರಾತ್ರಿ 8.20ಕ್ಕೆ ಮರಣ ಹೊಂದಿರುವುದಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಡಿಹೆಚ್ಓ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.