ಯಲ್ಲಾಪುರ (Yellapur): ಲಾರಿ ಡಿಕ್ಕಿ (Accident) ಹೊಡೆದ ಪರಿಣಾಮ ಕಾರಿನಲ್ಲಿದ್ದ ತಂದೆ-ತಾಯಿ ಮತ್ತು ೭ ತಿಂಗಳ ಮಗು ಮೃತಪಟ್ಟ ದಾರುಣ ಘಟನೆ ಅರಬೈಲ್ ಘಟ್ಟದ (Arabail Ghat) ಕೆಳಭಾಗದಲ್ಲಿ ಬುಧವಾರ ನಸುಕಿನ ಜಾವ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಯಲ್ಲಾಪುರದಿಂದ ಅಂಕೋಲಾ (Ankola) ಕಡೆ ಚಲಿಸುತ್ತಿದ್ದ ಲಾರಿ ಅರಬೈಲ್ ಘಟ್ಟ ಮುಕ್ತಾಯದ ನಂತರ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ (Accident) ಹೊಡೆದಿದೆ. ಕಾರಿನಲ್ಲಿದ್ದ ತಾಯಿ-ಮಗು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮಗುವಿನ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅರಬೈಲ್ ಘಟ್ಟದ ಇಳಿಜಾರಿನಲ್ಲಿ ವಿಜಯಪುರದ (Vijayapura) ಪ್ರಶಾಂತ ಕುಂಬಾರ ಅತಿ ವೇಗದಿಂದ ಲಾರಿ ಚಲಾಯಿಸಿಕೊಂಡು ಬಂದಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕೊಪ್ಪಳದ (Koppal) ಶ್ರೀಕಾಂತ ರೆಡ್ಡಿ ಅವರು ತಮ್ಮ ಕುಟುಂಬದೊಂದಿಗೆ ಅಂಕೋಲಾದಿoದ ಹುಬ್ಬಳ್ಳಿ (Hubballi) ಕಡೆ ಚಲಿಸುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಗುದ್ದಿದೆ.
ಇದನ್ನೂ ಓದಿ : Kumta/ ಗೇರು ಮರಕ್ಕೆ ನೇಣು ಬಿಗಿದ ವೃದ್ಧ
ವೇಗವಾಗಿ ಬಂದ ಲಾರಿ ಅರಬೈಲ್ ಮಾರುತಿ ದೇವಸ್ಥಾನದಿಂದ ಕೊಂಚ ಮುಂದೆ ಬಲಗಡೆ ಹೊರಳಿದೆ. ಆ ವೇಳೆ ಎದುರಿನಿಂದ ಬರುತ್ತಿದ್ದ ಕಾರಿಗೆ ರಭಸವಾಗಿ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಶ್ರೀಕಾಂತ ರೆಡ್ಡಿ ಅವರ ಪತ್ನಿ ಚೈತ್ರ ಆರ್ (೩೧) ಹಾಗೂ ಅವರ ೭ ತಿಂಗಳ ಮಗು ಶ್ರೀಹಾನ್ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಕಾರು ಚಾಲಕ ರಾಘವೇಂದ್ರ ರೆಡ್ಡಿ, ಜೊತೆಗಿದ್ದ ಆರ್ ವೆಂಕಟೇಶ್ ಗಂಭಿರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ : accident/ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ
ಯಲ್ಲಾಪುರ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಧಾರವಾಡದ (Dharwad) ಎಸ್ಡಿಎಂ ಆಸ್ಪತ್ರೆಯಲ್ಲಿ (SDM Hospital) ಚಿಕಿತ್ಸೆ ಪಡೆಯುತ್ತಿದ್ದಾಗ ಶ್ರೀಕಾಂತ ರೆಡ್ಡಿ ಕೊನೆಯುಸಿರೆಳೆದಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಯಲ್ಲಾಲಿಂಗ ಕುನ್ನೂರು ತನಿಖೆ ನಡೆಸುತ್ತಿದ್ದಾರೆ. ಸಿಪಿಐ ರಮೇಶ ಹಾನಾಪುರ ಹಾಗೂ ಶಿರಸಿ ಡಿವೈಎಸ್ಪಿ ಗಣೇಶ ಕೆ ಎಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪಘಾತದಲ್ಲಿ ಕಾರು ಮತ್ತು ಲಾರಿ ಜಖಂಗೊಂಡಿದೆ.
ಇದನ್ನೂ ಓದಿ : fake Journalists/ ನಕಲಿ ಪತ್ರಕರ್ತರು ಪೊಲೀಸ್ ವಶಕ್ಕೆ