ಭಟ್ಕಳ (Bhatkal) : ತಾಲೂಕಿನ ಬೈಲೂರು ಕ್ರಾಸ್‌ನಲ್ಲಿ ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಟೆಂಪೋಗೆ ಹಿಂಬದಿಯಿಂದ ಲಾರಿ ಡಿಕ್ಕಿ (lorry hit) ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ (Honnavar) ತಾಲೂಕಿನ ಅನಂತವಾಡಿ ಕೋಟಾ ನಿವಾಸಿ ನರೇಂದ್ರ ರಾಮಾ ಗೊಂಡ (೩೦) ಗಾಯಗೊಂಡವರು. ಫೆ.೨೫ರಂದು ಸಂಜೆ ೬.೩೦ರ ಸುಮಾರಿಗೆ ಈ ಘಟನೆ ನಡೆದಿದೆ. ಲಾರಿ ಚಾಲಕ ಕೇರಳದ (Kerala) ಇಡುಕ್ಕಿ ಜಿಲ್ಲೆಯ ಪಿರುಮಡೆ ತಾಲೂಕಿನ ಮುಕ್ಕಲಮ್‌ ನಿವಾಸಿ ಬಿನೀಶ ಭಾಸ್ಕರನ್‌ (೩೯) ವಿರುದ್ಧ ದೂರು (Complaint) ದಾಖಲಾಗಿದೆ.  ಟೆಂಪೋ ಚಾಲಕ ಹೊನ್ನಾವರದ ಮಂಕಿ ಸಿಂಗಾಣಿಹಿತ್ಲು ನಿವಾಸಿ ಅಣ್ಣಪ್ಪ ಮಹಾಬಲೇಶ್ವರ ನಾಯ್ಕ (೩೮) ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : collision/ ಗೂಡ್ಸ್‌ ರಿಕ್ಷಾ ಡಿಕ್ಕಿಯಾಗಿ ಬಾಲಕಿ ಸಹಿತ ಇಬ್ಬರಿಗೆ ಗಾಯ

ಭಟ್ಕಳದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಟೆಂಪೋ ಹೊನ್ನಾವರಕ್ಕೆ ಹೊರಟಿತ್ತು.  ಬೈಲೂರು ಕ್ರಾಸ್ ಹತ್ತಿರ ಪ್ರಯಾಣಿಕರನ್ನು ಇಳಿಸಲು ಟೆಂಪೋವನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದಾಗ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ (lorry hit).  ಅತೀ ವೇಗ ಹಾಗೂ ದುಡುಕಿನಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : compete / ಜಾಲಿ ಪಪಂ ಕಟ್ಟಡ; ಕ್ರೆಡಿಟ್‌ಗಾಗಿ ಹಾಲಿ-ಮಾಜಿ ಶಾಸಕರ ಪೈಪೋಟಿ