ಭಟ್ಕಳ (Bhatkal): ಹಿಂದೂ ಸಂಘಟನೆ ಕಾರ್ಯಕರ್ತ (Hindu Activist) ಶ್ರೀನಿವಾಸ ನಾಯ್ಕ ಅವರನ್ನು ಶಿರಸಿಗೆ (Sirsi) ಕರೆದು ಮುಂದಿನ ದಿನಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿ ಕಳಿಸಿದ್ದು ನಿಜ. ಆದರೆ, ಅವರ ಮೇಲೆ ಹಲ್ಲೆ ನಡೆಸಿಲ್ಲ. ಹಲ್ಲೆ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಉತ್ತರ ಕನ್ನಡ ಎಸ್ಪಿ (Uttara Kannada SP) ಎಂ. ನಾರಾಯಣ ತಿಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಕುರಿತು ಅವರು ಭಟ್ಕಳದ ಪೊಲೀಸ್ ಠಾಣೆಯಲ್ಲಿ ಬುಧವಾರ ಪತ್ರಕರ್ತರಿಗೆ ಸ್ಪಷ್ಟನೆ ನೀಡಿದ್ದಾರೆ. ಭಟ್ಕಳದ ಹನುಮಾನ ನಗರದ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಸೇರಿ ಇನ್ನೂ ಹಲವರನ್ನು ಮಂಗಳವಾರ ಶಿರಸಿಯಲ್ಲಿ ಕರೆದು ರೌಡಿ ಶೀಟರ್ಗಳ ಪರೇಡ್ ನಡೆಸಲಾಗಿದೆ. ಜಿಲ್ಲೆಯಲ್ಲಿ ಯಾರು ಕಾನೂನು ಸುವ್ಯವಸ್ಥೆಗೆ ಪದೇಪದೆ ಧಕ್ಕೆ ತರುತ್ತಾರೋ, ಯಾರ ಮೇಲೆ ೪-೫ಕ್ಕಿಂತ ಹೆಚ್ಚು ಪ್ರಕರಣಗಳಿದ್ದು, ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ, ಸಾರ್ವಜನಿಕವಾಗಿ ಶಾಂತತಾ ಭಂಗ ಮಾಡುವವರ ಮೇಲೆ ನಿಗಾ ಇಡಬೇಕಾಗಿರೋದು ಪೊಲೀಸ್ ಕರ್ತವ್ಯ. ಎಸ್ಪಿ, ಎಎಸ್ಪಿ, ಡಿವೈಎಸ್ಪಿಗಳು ತಮ್ಮ ವ್ಯಾಪ್ತಿಗೆ ಬಳಪಡುವ ಹತ್ತು ಮಂದಿ ರೌಡಿಶಿಟರ್ಗಳನ್ನ ವಿಚಾರಣೆ ಮಾಡಬೇಕು ಎಂದು ಪ್ರಧಾನ ಕಚೇರಿಯಿಂದ ಸೂಚನೆ ಬಂದಿತ್ತು. ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಉತ್ತರ ಕನ್ನಡ ಎಸ್ಪಿ (Uttara Kannada SP) ಎಂ.ನಾರಾಯಣ ತಿಳಿಸಿದರು.
ಇದನ್ನೂ ಓದಿ : overnight protest/ ಭಟ್ಕಳದಲ್ಲಿ ರಾತೋರಾತ್ರಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ನಮ್ಮ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ೯೯೬ ರೌಡಿಗಳಿದ್ದಾರೆ. ಯಾವುದೇ ಚಟುವಟಿಕೆಯಲ್ಲಿ ತೊಡಗಿರದ ೧೬೭ ಮಂದಿಯನ್ನು ರೌಡಿಶೀಟರ್ ಪ್ರಕರಣದಿಂದ ಕೈ ಬಿಡಲಾಗಿದೆ. ಭಟ್ಕಳದ ಶ್ರೀನಿವಾಸ ನಾಯ್ಕ ಸೇರಿ ಹತ್ತು ಮಂದಿಯನ್ನು ಶಿರಸಿಗೆ ಕರೆದು ವಿಚಾರಣೆ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಯಾವುದೇ ಕಾರ್ಯ ಮಾಡಬಾರದು ಎಂದು ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದೆ ಎಂದು ಹೇಳಿದರು.
ಇದನ್ನೂ ಓದಿ : Yasin Bhatkal/ ಯಾಸಿನ್ ಭಟ್ಕಳ ಸಹಿತ ಐವರಿಗೆ ಮರಣದಂಡನೆ
ರೌಡಿ ಚಟುವಟಿಕೆಯನ್ನು ಬಿಟ್ಟು ಉತ್ತಮ ಜೀವನ ನಡೆಸಬೇಕು ಎಂಬುದು ನಮ್ಮ ಉದ್ದೇಶ. ಈ ಉದ್ದೇಶದಿಂದಲೇ ಪೊಲೀಸ್ ಭಾಷೆಯಲ್ಲಿ ನಾವು ಎಚ್ಚರಿಕೆ ನೀಡಿದ್ದು ನಿಜ. ಆದರೆ ಅಲ್ಲಿಂದ ಹೊರ ಬಂದ ಮೇಲೆ ಎಸ್ಪಿ ಅವರು ಹಲ್ಲೆ ಮಾಡಿದ್ದಾರೆಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೇನು ಆಸ್ಪತ್ರೆ ವರದಿ ಬರಲಿದೆ. ವೈದ್ಯಕೀಯ ವರದಿಯಿಂದ ಸತ್ಯ ಬಹಿರಂಗವಾಗಲಿದೆ. ನಾನು ಹಲ್ಲೆ ಮಾಡಿದ್ದೇನೆ ಎಂದು ಅವರು ಸಾಬೀತುಪಡಿಸಲಿ ಎಂದರು.
ಇದನ್ನೂ ಓದಿ : vascular treatment/ ವ್ಯಾಸ್ಕ್ಯೂಲರ್ ಚಿಕಿತ್ಸೆಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ಸಾಧನೆ
ಸುಳ್ಳು ಸುದ್ದಿ ಹಬ್ಬಿಸಿಸುವುದು ಮತ್ತು ಈ ವಿಚಾರವಾಗಿ ಯಾವುದೇ ಅನುಮತಿಯಿಲ್ಲದೆ ಠಾಣೆಗೆ ಮುತ್ತಿಗೆ ಹಾಕಿ, ಹೆದ್ದಾರಿ ತಡೆ ನಡೆಸಲಾಗಿದೆ. ಯಾರೆಲ್ಲ ಕಾನೂನು ಉಲ್ಲಂಘಿಸಿ ನಡೆದುಕೊಂಡಿದ್ದಾರೊ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಎಂ. ನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ : NSUI/ ಉತ್ತರ ಕನ್ನಡ ಜಿಲ್ಲೆಗೆ ವಿದ್ಯಾರ್ಥಿ ನ್ಯಾಯ ಯಾತ್ರೆ