ಭಟ್ಕಳ (Bhatkal) : ಅಮೇರಿಕದ (America) ಕೊಲಂಬಿಯಾದಲ್ಲಿ (Colombia) ಅ.೨೧ರಿಂದ ನವೆಂಬರ ೧ರ ವರೆಗೆ ನಡೆಯುವ ವಿಶ್ವಸಂಸ್ಥೆಯ ೧೬ನೇ ಜೀವ ವೈವಿಧ್ಯತಾ ಮಹಾ ಸಮ್ಮೇಳನದಲ್ಲಿ (World conference) ಭಾರತೀಯ ಅರಣ್ಯ ಸೇವೆಯ (IFS) ಹಿರಿಯ ಅಧಿಕಾರಿ ಭಟ್ಕಳದ ಅಳಿಯ, ಸಾಗರ ಮೂಲದ ಎ.ಟಿ.ದಾಮೋದರ ನೇತೃತ್ವದ ೧೩ ಸದಸ್ಯರ ತಂಡ ಪಾಲ್ಗೊಳ್ಳಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅರುಣಾಚಲ ಪ್ರದೇಶ (Arunachal Pradesh) ರಾಜ್ಯದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಲಸ ಮಾಡುವುದರ ಜೊತೆಗೆ ಅಲ್ಲಿಯ ಜೀವಗೋಳ ಮೀಸಲು ಸಂಕೀರ್ಣಗಳ ನಿರ್ದೇಶಕ ಹಾಗೂ ರಾಷ್ಟ್ರೀಯ ಹುಲಿ ಸಂಯೋಜನೆ ಮುಖ್ಯಸ್ಥರ ಜವಾಬ್ದಾರಿಯನ್ನು ಎ.ಟಿ.ದಾಮೋದರ ಹೊಂದಿದ್ದಾರೆ. ಅವರು ಭಾರತದ ರಾಜತಾಂತ್ರಿಕ ರಾಯಭಾರ ಪ್ರತಿನಿಧಿಯಾಗಿ ಜೀವ ವೈವಿಧ್ಯತೆಯ ಮಹಾ ಸಮ್ಮೇಳನದಲ್ಲಿ ಮಾತನಾಡಲಿದ್ದಾರೆ. ಭಾರತದ ಜೀವ ವೈವಿಧ್ಯತೆಯ ಸಂರಕ್ಷಣೆಯ ಯಶೋಗಾಥೆ ಹಾಗೂ ಸವಾಲುಗಳ ಬಗೆಗಿನ ಸಮಾಲೋಚನಾ ಸಭೆಯಲ್ಲಿ (world conference) ಅವರು ಪಾಲ್ಗೊಳ್ಳಲಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : Bhatkal Bandh/ ಆಟೋ, ಮೀನು ಮಾರುಕಟ್ಟೆಗಿಲ್ಲ ಬಂದ್ ಬಿಸಿ
ಕಳೆದ ವರ್ಷ ಯುನೆಸ್ಕೋದ (Unesco) ಜೀವಗೋಳ ಮೀಸಲು ಸಂಕೀರ್ಣಗಳ ವಿಶ್ವ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಭಾರತದ ಪ್ರತನಿಧಿಯಾಗಿ ಅವರು ಪಾಲ್ಗೊಂಡಿದ್ದರು. ಲಕ್ಷದೀಪದ ಹವಳದ ದಂಡೆಗಳ ಅಲಂಕಾರಿಕ ಮೀನುಗಳು ಹಾಗೂ ಸಿಗಡಿಗಳ ಸಂರಕ್ಷಣೆ ಬಗ್ಗೆ ಅಧ್ಯಯನ ನಡೆಸಿದ ಪ್ರಬಂದಕ್ಕೆ ಗೌರವ ಪಿ.ಎಚ್.ಡಿ ಪದವಿ ಲಭಿಸಿದೆ. ಭಟ್ಕಳದಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಎ.ಟಿ.ದಾಮೋದರ ಅವರು ಮೂಲತಃ ಸಾಗರ ತಾಲ್ಲೂಕಿನ ನಾಗವಳ್ಳಿ ನಿವಾಸಿಯಾಗಿದ್ದಾರೆ. ಭಟ್ಕಳದ ಮಾಜಿ ಶಾಸಕ ಜೆ.ಡಿ.ನಾಯ್ಕ ಅವರ ಅಳಿಯ ಆಗಿದ್ದಾರೆ.