ಭಟ್ಕಳ : ಇಲ್ಲಿನ ಕೃಷಿ ಇಲಾಖೆಯು ೨೦೨೪-೨೫ನೇ ಸಾಲಿನ ಕೃಷಿ ಪ್ರಶಸ್ತಿ (Agricultural award)ಗೆ ತಾಲೂಕಿನ ಭತ್ತ ಬೆಳೆದ ಅರ್ಹ ರೈತರಿಂದ ಅರ್ಜಿ(application) ಆಹ್ವಾನಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳ(Bhatkal) ತಾಲೂಕು ಕೃಷಿ ಇಲಾಖೆ ೨೦೨೪-೨೫ ನೇ ಸಾಲಿನ ಕೃಷಿ ಪ್ರಶಸ್ತಿ (Agricultural award)ಗೆ ತಾಲೂಕಿನ ಭತ್ತ ಬೆಳೆದ ಅರ್ಹ ರೈತ(farmer) ಮತ್ತು ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಪ್ರೋತ್ಸಾಹ ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದನ್ನೂ ಓದಿ : ನಾಳೆಯೂ ಇದೆ ದೇಹದಾರ್ಢ್ಯತೆ- ಸಹಿಷ್ಣುತೆ ಪರೀಕ್ಷೆ
ಆಸಕ್ತ ರೈತ/ರೈತ ಮಹಿಳೆಯರು ಕನಿಷ್ಟ ಒಂದು ಎಕರೆ ಭತ್ತದ ವಿಸ್ತೀರ್ಣವನ್ನು ಹೊಂದಿರಬೇಕು. ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸಲು ಮತ್ತು ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಲು ರೈತ ಮಹಿಳೆಯರಿಗೆ ಪ್ರತ್ಯೇಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರೈತ ಮಹಿಳೆಯರು ಪ್ರತ್ಯೇಕ ಅರ್ಜಿ ಸಲ್ಲಿಸಲು ಕೋರಿದೆ.
ಇದನ್ನೂ ಓದಿ : ಮೂತ್ರ ವಿಸರ್ಜನೆಗೆ ಹೋದ ಮಹಿಳೆ ಸಾವು
ಪ್ರಶಸ್ತಿಗೆ ಅರ್ಜಿಯನ್ನು ಸಲ್ಲಿಸಲು ಆಗಸ್ಟ ೩೧ ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ಐ. ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.