ಕಾರವಾರ : ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ರಾಷ್ಟ್ರೀಯ ಹೆದ್ದಾರಿಯ ಹಳೇ ಸೇತುವೆ ಕುಸಿದಿರುವ ಹಿನ್ನೆಲೆ ಪರ್ಯಾಯ ಮಾರ್ಗ (Alternative route)ಸೂ ಚಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಹೊಸ ಸೇತುವೆಯ ವರದಿ ಬಾರದ ಹಿನ್ನೆಲೆ ವಾಹನ ಸಂಚಾರ ನಿಷೇಷೇಧಿಸಲಾಗಿದದೆ. ಹೀಗಾಗಿ ವಾಹನ ಸಂಚಾರಕ್ಕೆ ಬದಲಿ ಮಾರ್ಗದ (Alternative route) ವ್ಯವಸ್ಥೆ ಕೆಳಗಿನಂತೆ ಮಾಡಲಾಗಿದೆ.
೧. ಗೋವಾದಿಂದ ಚೋರ್ಲಾ ಘಾಟ-ಮಚ್ಚೆ ಮೂಲಕ ಬೆಳಗಾವಿಗೆ ಹೋಗುವುದು.
೨. ಚಿತ್ತಾಕುಲದಿಂದ ಕದ್ರಾ-ಮಲ್ಲಾಪುರ-ಕಾರವಾರ ರೈಲ್ವೆ ನಿಲ್ದಾಣ ಮೂಲಕ ಕಾರವಾರ ನಗರ ಪ್ರವೇಶಿಸುವುದು.
ವಿಡಿಯೋ ಸಹಿತ ಇದನ್ನೂ ಓದಿ : ಕಾಳಿ ಸೇತುವೆ ಕುಸಿತ; ಗೋವಾ-ಕಾರವಾರ ಹೆದ್ದಾರಿ ಬಂದ್
ಸದ್ಯ ಕಾರವಾರ ತಾಲೂಕಿನ ಸದಾಶಿವಗಡ, ಅಸ್ನೋಟಿ, ದೇವಬಾಗ, ಮಾಜಾಳಿ ಜನರು ಕಾರವಾರ ನಗರಕ್ಕೆ ಬರಲು ಹೊಸ ಸೇತುವೆ ಮೇಲೆ ಬೈಕ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬೇಕ್ ಇಲ್ಲದವರು ನಡೆದುಕೊಂಡೇ ಸೇತುವೆ ಮೇಲೆ ತೆರಳುತ್ತಿರುವುದು ಕಂಡುಬಂತು. ಬೆಳಿಗ್ಗೆ ಶಾಲಾ ವಾಹನಗಳಿಗೆ ಅವಕಾಶ ನೀಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವರದಿ ಬಂದ ನಂತರ ಮುಂದಿನಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಇದನ್ನೂ ಓದಿ : ಮುಗಿಲೆತ್ತರ ಧಗದಹಿಸಿದ ಬೆಂಕಿ – ಮೂವರ ಸ್ಥಿತಿ ಗಂಭೀರ