ಭಟ್ಕಳ (Bhatkal): ಬೈಕೊಂದು ಮುಂದಿನಿಂದ ಹೋಗುತ್ತಿದ್ದ ಇನ್ನೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು (bikes collision) ಮುಂದಿನ ಬೈಕ್‌ ಸವಾರ ಮತ್ತು ಹಿಂಬದಿ ಸವಾರ ಗಾಯಗೊಂಡ ಘಟನೆ ನಿನ್ನೆ ಸಂಜೆ ೫.೧೫ರ ಸುಮಾರಿಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಜಾಲಿಯ ತಲಗೇರಿ ನಿವಾಸಿಗಳಾದ  ಕೇಶವ ಜಟ್ಟಪ್ಪ ನಾಯ್ಕ (೩೦) ಮತ್ತು ಯೋಗೇಶ ತಿಮ್ಮಯ್ಯ ನಾಯ್ಕ (೩೪) ಗಾಯಗೊಂಡವರು. ಇವರು ಭಟ್ಕಳ ಕಡೆಯಿಂದ ತಮ್ಮೂರಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಕೇಶವ ನಾಯ್ಕ ಚಲಾಯಿಸುತ್ತಿದ್ದ ಬೈಕ್‌ಗೆ ದೇವಿನಗರ ಕೋಲಾ ಗ್ರೌಂಡ್‌ ಬಳಿ ಹಿಂಬದಿಯಿಂದ ಮಣ್ಕುಳಿಯ ಹೈಡಕಿ ನಿವಾಸಿ ಚಿದಾನಂದ ಅಣ್ಣಪ್ಪ ನಾಯ್ಕ ಚಲಾಯಿಸುತ್ತಿದ್ದ ಬೈಕ್‌ ಡಿಕ್ಕಿ ಹೊಡೆದಿದೆ (bikes collision). ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ಇದನ್ನೂ ಓದಿ :  ಚಾಲಕನ ನಿಯಂತ್ರಣ ತಪ್ಪಿ ಗಾರ್ಡನ್‌ಗೆ ನುಗ್ಗಿದ ಕಾರು