ಭಟ್ಕಳ (Bhatkal) : ಬೈಕ್‌ಗೆ ಇನ್ನೊಂದು ಬೈಕ್‌ ಹಿಂಬದಿಯಿಂದ ಗುದ್ದಿದ (Bike hit) ಪರಿಣಾಮ ಯುವಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಮಾವಿನಕಟ್ಟಾದ ಕರಡಿಮನೆ ನಿವಾಸಿ ರಾಹುಲ್‌ ಮಾದೇವ ನಾಯ್ಕ (೨೨) ಗಾಯಗೊಂಡ ಯುವಕ. ಡಿ.೧೬ರಂದು ಬೆಳಿಗ್ಗೆ ೧೦.೧೫ರ ಸುಮಾರಿಗೆ ಘಟನೆ ನಡೆದಿದೆ. ಇವರು ತಮ್ಮ ಸೋದರ ಮಾವ ಬೆಳಕೆಯ ಕುಂಜಿಗೊಂಡ ನಿವಾಸಿ ಮಂಜುನಾಥ ಸೋಮಯ್ಯ ನಾಯ್ಕ (೪೩) ಅವರ ಬೈಕಿನಲ್ಲಿ ಭಟ್ಕಳ ಕಡೆಯಿಂದ ಮುರ್ಡೇಶ್ವರದ (Murdeshwar) ಕಡೆಗೆ ಹೋಗುತ್ತಿದ್ದರು.

ಇದನ್ನೂ ಓದಿ : Bus Conductor/ ಪೊಲೀಸರ ಮೊರೆಹೋದವನ ಮೇಲೆಯೇ ಬಿತ್ತು ಕೇಸ್; ಯಾಕೆ ಗೊತ್ತಾ?

ಇಂಡಿಕೇಟರ್‌ ಬಳಸಿ ಬೈಕನ್ನು ಬಲಬದಿಗೆ ತಿರುಗಿಸುತ್ತಿರುವಾಗ ಹಿಂದಿನಿಂದ ವೇಗವಾಗಿ ಬಂದ ಇನ್ನೊಂದು ಬೈಕ್‌ ಡಿಕ್ಕಿ ಹೊಡೆದಿದೆ (Bike hit). ಪರಿಣಾಮ ಹಿಂಬದಿ ಸವಾರನಾಗಿದ್ದ ರಾಹುಲ ಅವರ ಬಲಕಾಲಿಗೆ ಗಾಯವಾಗಿದೆ. ಅವರನ್ನು ಭಟ್ಕಳದ  ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿ ಹೊಡೆದ ಬೈಕ್‌ ಸವಾರ ಅಳ್ವೆಕೋಡಿ ಸಣಬಾವಿಯ ದಯಾನಂದ ಪರಮೇಶ್ವರ ನಾಯ್ಕ (೨೯) ವಿರುದ್ಧ ಮುರ್ಡೇಶ್ವರ (Murudeshwar) ಪೊಲೀಸ್‌ ಠಾಣೆಯಲ್ಲಿ ದೂರು (Complaint) ದಾಖಲಿಸಲಾಗಿದೆ.

ಇದನ್ನೂ ಓದಿ :  ತುಳಸಿ ಅಜ್ಜಿಯ ಅದ್ಬುತ ಪಯಣ