ಭಟ್ಕಳ (Bhatkal): ಮೀನುಗಾರಿಕೆಗೆ (fishing) ತೆರಳಿದ್ದಾಗ ಮೀನುಗಾರರು ಸಮುದ್ರದಲ್ಲಿ ಬಿದ್ದು ಸಾವನ್ನಪ್ಪಿದ (fisherman died) ಘಟನೆಗಳು ಭಟ್ಕಳ ತಾಲೂಕಿನಲ್ಲಿ ಹೆಚ್ಚುತ್ತಿವೆ. ಇತ್ತೀಚೆಗೆ ನೇಪಾಳ (Nepal) ದೇಶದ ಮೀನುಗಾರ ಬೆಳಕೆ ಬಳಿ ಸಮುದ್ರದಲ್ಲಿ ಬಿದ್ದು ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಅಳ್ವೆಕೋಡಿಯಲ್ಲಿ ಜಾರ್ಖಂಡ (Jarkhand) ರಾಜ್ಯದ ಮೀನುಗಾರ ಸಾವನ್ನಪ್ಪಿದ್ದಾನೆ. ಇದೀಗ ಕಾಯ್ಕಿಣಿಯ ಹೆರಾಡಿ ಬಳಿ ಮೀನುಗಾರನೋರ್ವ ಸಮುದ್ರದಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಾಯ್ಕಿಣಿ ಹೆರಾಡಿಯ ಮಂಜುನಾಥ ನಾರಾಯಣ ಹರಿಕಂತ್ರ (೬೩) ಮೃತ ದುರ್ದೈವಿ. ನಿನ್ನೆ ಸೆ.೨೭ರಂದು ಮಧ್ಯಾಹ್ನ ೧.೩೦ರ ಸುಮಾರಿಗೆ ಸಹೋದರ ಮಾಧವ ಮತ್ತು ಮಗ ಶ್ರೀಧರ ಜೊತೆ ಹೆರಾಡಿ ತಟದಿಂದ ಅರಬ್ಬೀ ಸಮುದ್ರಕ್ಕೆ (Arabian sea) ಮೀನುಗಾರಿಕೆಗೆ ತೆರಳಿದ್ದರು.
ಇದನ್ನೂ ಓದಿ : SDMC / ವನಿತಾ ನಾಯ್ಕ ಅಧ್ಯಕ್ಷೆ, ಕೃಷ್ಣ ನಾಯ್ಕ ಉಪಾಧ್ಯಕ್ಷ
ಸಮುದ್ರದಲ್ಲಿ ಬಲೆ ಹಾಕುತ್ತಿದ್ದಾಗ ಮಧ್ಯಾಹ್ನ ೨:೧೫ ಗಂಟೆಯಿಂದ ೨:೪೫ ರ ನಡುವೆ ಸಮುದ್ರದಲ್ಲಿ ಒಮ್ಮೆಲೆ ರಭಸವಾದ ದೊಡ್ಡ ಅಲೆಗೆ ಇವರ ದೋಣಿ ಸಿಲುಕಿತು. ದೋಣಿ ಅಲುಗಾಡಿದಾಗ ಮೂವರೂ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಮಂಜುನಾಥ ಹರಿಕಂತ್ರ ಮೇಲಕ್ಕೆ ಬರಲಾಗದೆ ನೀರಿನಲ್ಲಿ ಮುಳುಗಿದ್ದಾರೆ. ಅವರ ಮಗ ಹಾಗೂ ಸಹೋದರ ಹೇಗೋ ಈಜಿಕೊಂಡು ದೋಣಿ ಹತ್ತಿದ್ದಾರೆ. ನಂತರ ಇಬ್ಬರೂ ಅವರನ್ನು ಹುಡುಕಾಡಿ ನೀರಿನಿಂದ ಮೇಲಕ್ಕೆ ಎತ್ತಿ, ದೋಣಿಯಲ್ಲಿ ಹಾಕಿಕೊಂಡು ದಡಕ್ಕೆ ಬಂದು ತಲುಪಿದ್ದಾರೆ.
ಇದನ್ನೂ ಓದಿ : ದೂರಿಗೆ ಪ್ರತಿದೂರು ದಾಖಲು
ಅಲ್ಲಿಂದ ಆಟೋ ರಿಕ್ಷಾ ಮೇಲೆ ಮುರುಡೇಶ್ವರದ (Murudeshwar) ಆರ್.ಎನ್.ಎಸ್ ಆಸ್ಪತ್ರೆಗೆ (RNS Hospital) ಕರೆದುಕೊಂಡು ಬಂದು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಮಧ್ಯಾಹ್ನ ೩:೦೫ ಗಂಟೆ ಸುಮಾರಿಗೆ ಪರೀಕ್ಷಿಸಿದ ವೈಧ್ಯರು ಅದಾಗಲೇ ಮೃತಪಟ್ಟ ಬಗ್ಗೆ (fisherman died) ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೃತರ ಮಗ ಶ್ರೀಧರ ಅವರು ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಡಿಯೋ ಸಹಿತ ಇದನ್ನೂ Viral video/ ಸಾಗರ ರಸ್ತೆಯಲ್ಲಿ ಸಿಂಹಗಳ ಹಿಂಡು !?ಓದಿ :