ಭಟ್ಕಳ (Bhatkal): ಕರ್ನಾಟಕ ವಿಶ್ವವಿದ್ಯಾಲಯ (Karnataka University) ೨೦೨೩ರಲ್ಲಿ ನಡೆದ ಬಿ.ಸಿ.ಎ. (BCA) ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ (Guru Sudhindra) ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಖಾರ್ವಿ ಶೇ. ೯೧.೭೩ ಪಡೆದು ಕರ್ನಾಟಕ ವಿಶ್ವವಿದ್ಯಾಲಯದ ಬಿಸಿಎ ವಿಭಾಗದಲ್ಲಿ ತೃತೀಯ ರ್ಯಾಂಕ್ (University Rank) ಪಡೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೀಕ್ಷಾ ಖಾರ್ವಿಯವರು ಭಟ್ಕಳದ ಮಂಗಲಾ ಹಾಗೂ ನಾಗಪ್ಪ ಖಾರ್ವಿಯವರ ಸುಪುತ್ರಿಯಾಗಿದ್ದಾರೆ. ಈ ವಿದ್ಯಾರ್ಥಿನಿಯ ಅಪ್ರತಿಮ ಸಾಧನೆಯಿಂದ ಉತ್ತರ ಕನ್ನಡ ಜಿಲ್ಲೆ (Uttara Kannada) ಹೆಮ್ಮೆ ಪಡುವಂತಾಗಿದೆ. ಈ ಯುವ ಪ್ರತಿಭೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ : ಸೆಪ್ಟೆಂಬರ್ ೧೦ರಂದು ವಿವಿಧೆಡೆ ಅಡಿಕೆ ಧಾರಣೆ