ಹೊನ್ನಾವರ (Honnavar) : ಮಧ್ಯ ಏಷ್ಯಾದ (middle asia) ಕಿರ್ಗಿಸ್ತಾನ್ (Kyrgyzstan) ದೇಶದ ರಾಜಧಾನಿ ಬಿಶ್ಕೆಕ್‌ನಲ್ಲಿ (Bishkek) ನಡೆದ ೨ನೇ ಏಷ್ಯನ್ ಚೆಸ್ (Asian Chess) ಚಾಂಪಿಯನ್‌ಶಿಪ್ -೨೦೨೪ರ ವಿಕಲಾಂಗ ವಿಭಾಗದಲ್ಲಿ ಹೊನ್ನಾವರದ ಸಮರ್ಥ ಜಗದೀಶ ರಾವ್ ಬೆಳ್ಳಿ ಪದಕ (Silver medal) ಗಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಮರ್ಥ ಈವರೆಗೆ ಅಂತರರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ೧ ಚಿನ್ನ, ೩ ಬೆಳ್ಳಿ, ೩ ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಇವರು ಮೈಸೂರಿನ (Mysuru) ಅಜಿತ್ ಎಂ.ಪಿ.ಯವರ ಶಿಷ್ಯರು. ಚೆಸ್ ಫೆಡರೇಶನ್ (chess federation) ಫಾರ್ ಫಿಸಿಕಲಿ ಡಿಸೇಬಲ್ಡ್ ಇಂಡಿಯಾದ ಇತಿಹಾಸದಲ್ಲಿ ಇದು ಐತಿಹಾಸಿಕ ಸಂಗತಿಯಾಗಿದೆ. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಹಣಕಾಸು ನೆರವು ಮತ್ತು ಆಲ್ ಇಂಡಿಯಾ ಚೆಸ್ ಫೆಡರೇಶನ್ ಮತ್ತು ಪಿ.ಸಿ.ಐ.ನ ಸಹಕಾರದೊಂದಿಗೆ ೮ ವಿಕಲಾಂಗ ಚೆಸ್ ಆಟಗಾರರು, ೮ ಸಹಾಯಕರು, ತರಬೇತುದಾರರು, ತಂಡ ವ್ಯವಸ್ಥಾಪಕರು ಮತ್ತು ಹೆಡ್ ಆಫ್ ಡೆಲಿಗೇಟ್ಸ್ ಅವರನ್ನು ೨ನೇ ಏಷ್ಯನ್ ಚೆಸ್ (Asian Chess) ಚಾಂಪಿಯನ್‌ಶಿಪ್‌ಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ : ಜಗತ್ತಿನ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕಿತ ಚೆಸ್ ಆಟಗಾರ
ಭಾರತೀಯ ಆಟಗಾರರ ಸಾಧನೆಯ ವಿವರ: ಮುಕ್ತ ವರ್ಗ : ವೆಂಕಟಕೃಷ್ಣ ಕಾರ್ತಿಕ್ ವಿಜಯವಾಡ [6/9] -ಚಿನ್ನ, ಸಮರ್ಥ ಜೆ ರಾವ್ ಕರ್ನಾಟಕ (Karnataka) [6/9] -ಬೆಳ್ಳಿ. ಬಾಲಕರ ವಿಭಾಗ: ಜಿನಾಯ್ ಅಂಕಿತ್‌ಭಾಯ್ ಶಾಹ್ ಗುಜರಾತ್ [4.5/9]- ಬೆಳ್ಳಿ, ಆದಿತ್ಯ ಅಸಾರಾಂ ಘುಲೆ ಮಹಾರಾಷ್ಟ್ರ [4.5/9] -ಕಂಚು. ಬಾಲಕಿಯರ ವಿಭಾಗ : ಶೆರಾನ್ ರೇಚೆಲ್ ಅಬಿ ತಮಿಳುನಾಡು [3.5/9] -ಚಿನ್ನ, ದುರ್ಕಾಸ್ರಿ ಮಾರುತಯ್ಯ ತಮಿಳುನಾಡು [5/9). ಮಹಿಳೆಯರ ವಿಭಾಗ: ಎಜಿಲರಸಿ ಗೋಪಾಲಕೃಷ್ಣ, ಕರ್ನಾಟಕ [6/9]- ಅತ್ಯುತ್ತಮ ಶ್ರೇಯಾಂಕ ರಹಿತ ಆಟಗಾರ್ತಿ.
ಇದನ್ನೂ ಓದಿ : ವಿಶ್ವ ಮಟ್ಟದ ಚೆಸ್ ನಲ್ಲಿ ಬೆಳ್ಳಿ ಗೆದ್ದ ಸಮರ್ಥ ರಾವ್