ಭಟ್ಕಳ (Bhatkal): ತಾಲೂಕಿನ ಕಡವಿನಕಟ್ಟೆಯಲ್ಲಿ ನಡೆದ ಹಲ್ಲೆ (Assault) ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಕೆಯ ಪ್ರಮೋದ ಪರಮೇಶ್ವರ ನಾಯ್ಕ ಅವರು ಕಡವಿನಕಟ್ಟೆ ಕಂಡೆಕೋಡ್ಲು ನಿವಾಸಿ ಗಣಪತಿ ಶನಿಯಾರ ನಾಯ್ಕ ಮತ್ತು ಇನ್ನೂ ಮೂವರ ವಿರುದ್ಧ ದೂರು (complaint) ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗಣಪತಿ ಶನಿಯಾರ ನಾಯ್ಕ ಅವರು ಪ್ರಮೋದ ಮತ್ತು ಅವರ ತಂದೆ ಪರಮೇಶ್ವರ ನಾಯ್ಕ ವಿರುದ್ಧ ದೂರು ಕೊಟ್ಟಿದ್ದಾರೆ. ದೂರು, ಪ್ರತಿದೂರು ದಾಖಲಿಸಿಕೊಂಡಿರುವ (case registered) ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್ ವ್ಯತ್ಯಯ
ದೂರಿನಲ್ಲೇನಿದೆ?: ಬೆಳಕೆಯ ಪ್ರಮೋದ ಪರಮೇಶ್ವರ ನಾಯ್ಕ ದೂರಿನಲ್ಲಿ ತಿಳಿಸಿರುವಂತೆ, ಪ್ರಮೋದ ನಾಯ್ಕ ತನ್ನ ತಂದೆಯ ಜೊತೆಯಲ್ಲಿ ಮೊಟಾರ್ ಸೈಕಲ್ ಮೇಲೆ ಕಡವಿನಕಟ್ಟೆ ದುರ್ಗಾಪರಮೇಶ್ವರಿ (Durgaparameshwari) ದೇವಸ್ಥಾನಕ್ಕೆ ಹೋಗುತ್ತಿದ್ದರು. ಆಗ ಕಡವಿನಕಟ್ಟೆ ರೈಲ್ವೆ ಬ್ರಿಡ್ಜ್ ಸಮೀಪ ಆರೋಪಿ ಗಣಪತಿ ಶನಿಯಾರ ನಾಯ್ಕ ಟಿಪ್ಪರ ಲಾರಿಯವನ ಜೊತೆಯಲ್ಲಿ ಮಾತನಾಡುತ್ತಿದ್ದರು. ದೂರುದಾರ ಪ್ರಮೋದ ನಾಯ್ಕ ತನಗೆ ಮುಂದೆ ಹೋಗಲು ದಾರಿ ಬಿಡುವಂತೆ ಕೇಳಿದ್ದಕ್ಕೆ ಗಣಪತಿ ನಾಯ್ಕ ಪ್ರಮೋದ ನಾಯ್ಕರ ತಂದೆಗೆ ದೂಕಿದ್ದಾರೆ. ಇದನ್ನು ಪ್ರಶ್ನಿಸಿದ ಪ್ರಮೋದ ನಾಯ್ಕರಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು, ಹಲ್ಲೆ (Assault) ನಡೆಸಿದ್ದಲ್ಲದೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ. ದೇವಸ್ಥಾನಕ್ಕೆ ಹೋಗಿ ಪೊಜೆ ಮಾಡಿ ಮರಳಿ ಬರುವಾಗ ದೇವಸ್ಥಾನದ ಪಾರ್ಕಿಂಗ್ ಜಾಗದಲ್ಲಿ ಆರೋಪಿ ಗಣಪತಿ ನಾಯ್ಕ ಇತರ ಮೂವರು ಅಪರಿಚಿತರೊಂದಿಗೆ ಬಂದು ಪುನಃ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಶಿವಮೊಗ್ಗದ ಕಾರಿಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರಿಗೆ ಗಾಯ
ಪ್ರತಿದೂರು ದಾಖಲು: ಗಣಪತಿ ನಾಯ್ಕ ಇದಕ್ಕೆ ಪ್ರತಿಯಾಗಿ ದೂರು ದಾಖಲಿಸಿದ್ದು, ತಂದೆ ಮತ್ತು ಮಗ ಇಬ್ಬರೂ ಸೇರಿ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಗಣಪತಿ ನಾಯ್ಕ ತಮ್ಮ ಸ್ಪ್ಲೆಂಡರ್ ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಓವರ್ ಟೇಕ್ ಮಾಡಿದ ಪ್ರಮೋದ ನಾಯ್ಕ ರೈಲ್ವೆ ಮೇಲ್ಸೇತುವೆ ಬಳಿ ಅಡ್ಡಿ ಹಾಕಿ ಹಲ್ಲೆ ಮಾಡಿದ್ದಾರೆ. ಅವರ ತಂದೆ ಪರಮೇಶ್ವರ ನಾಯ್ಕ ಕೂಡ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾರೆ. ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕಿಸೆಯಲ್ಲಿದ್ದ ೨೫೫೦೦ ರೂ. ಹಣವನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ ಮೊಬೈಲ್ ಒಡೆದು ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ತಾನು ಪೊಲೀಸ್ ಅಧಿಕಾರಿಯೆಂದು ಜೀವ ಬೆದರಿಕೆ ಹಾಕಿರುವುದಾಗಿ ಗಣಪತಿ ನಾಯ್ಕ ದೂರಿದ್ದಾರೆ.
ಇದನ್ನೂ ಓದಿ : ಡಿಪೋದಲ್ಲಿದ್ದ ಸಾರಿಗೆ ಬಸ್ ಬೆಂಕಿಗಾಹುತಿ