ಭಟ್ಕಳ (Bhatkal) : ಇಲ್ಲಿನ ಪ್ರತಿಷ್ಠಿತ ಐ.ಸಿ.ಎಸ್.ಇ. ಪಠ್ಯಕ್ರಮದ (ICSE syllabus) ವಿದ್ಯಾಂಜಲಿ ಪಬ್ಲಿಕ್ ಶಾಲೆಯು ಎಜ್ಯುಕೇಶನ ನ್ಯೂಸ್ ನೆಟ್ವರ್ಕ ಸಂಸ್ಥೆಯು ನೀಡುವ “ಡೈನಮಿಕ್ ಸ್ಕೂಲ್-೨೦೨೪”” ಎಂಬ ರಾಷ್ಟ್ರ ಮಟ್ಟದ ಪ್ರಶಸ್ತಿ (Award) ಪಡೆದುಕೊಳ್ಳುವ ಮೂಲಕ ಸಾಧನೆಯ ಕಿರೀಟಕ್ಕೆ ಹೊಸ ಗರಿಯೊಂದು ಸೇರಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಡಿ.೧೦ರಂದು ಎಜುಕೇಶನ್ ಟುಡೇ ಆಯೋಜಿಸಿದ್ದ ಕೆ-೧೨ ಲೀಡರಶಿಪ್ ಮತ್ತು ಇಂಡಿಯಾ ಸ್ಕೂಲ್ ಮೆರಿಟ್ ಅವಾರ್ಡಗಳ ಕುರಿತಾದ ೧೨ ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮ್ಮೇಳನದಲ್ಲಿ ಭಟ್ಕಳ ಎಜ್ಯುಕೇಶನ್‌ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್‌ ರಾಜೇಶ ನಾಯಕ ಈ ಪ್ರಶಸ್ತಿಯನ್ನು (Award) ಸ್ವೀಕರಿಸಿದ್ದಾರೆ.

ಇದನ್ನೂ ಓದಿ : ಐವರ ಮೇಲೆ ಹೆಜ್ಜೇನು ದಾಳಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಒಳಗೊಂಡ ಶಿಕ್ಷಣ ಸಂಸ್ಥೆಯು ತಂತ್ರಜ್ಞಾನ ಆಧಾರಿತ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು,ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸತತ ೧೦ ವರ್ಷಗಳಿಂದ ೧೦೦ ಪ್ರತಿಶತ ಫಲಿತಾಂಶದೊಂದಿಗೆ ಈ ಸಾಲಿನಲ್ಲಿ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯುತ್ತಿರುವುದು ಶಾಲೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ವರ್ಷದ ಜೂನ್ ತಿಂಗಳಿನಲ್ಲಿ ಮೋಸ್ಟ್‌ ಇನ್ನೋವೇಟಿವ್ ಸ್ಕೂಲ್ ಎನ್ನುವ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು. ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಎಜ್ಯಕೇಶನ್ ಟ್ರಸ್ಟ ನ ಚೇರಮನ್ ಡಾಕ್ಟರ್ ಸುರೇಶ ನಾಯಕ, ಶಾಲೆಯ ಶಿಕ್ಷಕರ ಪರಿಶ್ರಮ ಹಾಗೂ ಸದಾ ಬೆನ್ನೆಲುವಾಗಿ ನಿಲ್ಲುವ ಪಾಲಕರ ಸಹಕಾರವನ್ನು ಸ್ಮರಿಸಿದರು. ಈ ಪ್ರಶಸ್ತಿಯ ಶ್ರೇಯವು ಪ್ರತಿಯೊಬ್ಬರಿಗೂ ಸಲ್ಲಬೇಕೆಂದು ತಿಳಿಸಿದರು.

ಇದನ್ನೂ ಓದಿ : ಭಟ್ಕಳದ ಕ್ರೀಡಾಪಟುಗಳ ಸಾಧನೆ