ಭಟ್ಕಳ : ಚಿಕ್ಕಬಳ್ಳಾಪುರದ (chikkaballapura) ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಕೊಡಮಾಡುವ ಪ್ರಸಕ್ತ ಸಾಲಿನ “ಕ್ಲೀನ್ ಮತ್ತು ಗ್ರೀನ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್(Award)ಗೆ ಭಟ್ಕಳ(Bhatkal) ತಾಲೂಕಿನ ಬೆಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಸರ್ಕಾರಿ ಶಾಲೆಗಳಿಗೆ ಬೆಂಬಲವಾಗಿ, ಈ ಪ್ರಶಸ್ತಿಯು ಸ್ವಚ್ಛತೆ ಮತ್ತು ಸುಸ್ಥಿರತೆಗೆ ತಮ್ಮ ಬದ್ಧತೆಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸುತ್ತದೆ. ಈ ಪ್ರಶಸ್ತಗಾಹಿ ಅಗಾಧ ಸಂಖ್ಯೆಯ ನಾಮನಿರ್ದೇಶನಗಳು ಸ್ವೀಕಾರವಾಗಿತ್ತು. ಆಯ್ಕೆ ಪ್ರಕ್ರಿಯೆಯು ಸಾಕಷ್ಟು ಸವಾಲಿನದ್ದಾಗಿತ್ತು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : ಭಟ್ಕಳದ ನಾರಾಯಣ ನಾಯ್ಕರಿಗೆ ಡಾಕ್ಟರೇಟ್

ಟ್ರಸ್ಟ್‌ನ ಪರಿಶೀಲನಾ ತಂಡಗಳು, ವಿವಿಧ ಶಾಲೆಗಳಿಗೆ ಭೇಟಿ ನೀಡಿದ್ದವು. ಪ್ರಶಸ್ತಿಗೆ ಆಯ್ಕೆಮಾಡಲು ೨೨ ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲಾಗಿತ್ತು. ಅವುಗಳಲ್ಲಿ ಬೆಣಂದೂರು ಶಾಲೆಯು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದೆ.