ಕಾರವಾರ (Karwar) : ಮುಂಬೈ (Mumbai) ನಗರ, ಗುಜರಾತ ಮತ್ತು ಕರ್ನಾಟಕದಾದ್ಯಂತ (Karnataka) ಹರಡಿರುವ ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆಯಲ್ಲಿ (child trafficking) ಭಾಗಿಯಾಗಿದ್ದ ಎಂಟು ಮಹಿಳೆಯರು ಸೇರಿದಂತೆ ಒಂಭತ್ತು ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ (Karnataka)  ಕಾರವಾರದಲ್ಲಿ ದಂಪತಿಗೆ 5 ಲಕ್ಷ ರೂ.ಗೆ ಮಾರಾಟವಾಗಿದ್ದ ನಾಲ್ಕು ತಿಂಗಳ ಹೆಣ್ಣು ಮಗುವನ್ನು ರಕ್ಷಿಸಲಾಗಿದೆ. ಈ ಪ್ರಕರಣದಲ್ಲಿ ಕಾರವಾರದ ಸ್ತ್ರೀರೋಗ ತಜ್ಞೆ ಮತ್ತು ನರ್ಸ್ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸುಲೋಚನಾ ಸುರೇಶ ಕಾಂಬಳೆ (45), ಮೀರಾ ರಾಜಾರಾಂ ಯಾದವ (40), ಯೋಗೇಶ ಭೋರ್ (37), ರೋಶನಿ ಘೋಷ್ (34), ಸಂಧ್ಯಾ ರಜಪೂತ (48), ಮದೀನಾ ಅಲಿಯಾಸ್ ಮುನ್ನಿ ಇಮಾಮ್ ಚೌಹಾಣ (44), ತೈನಾಜ್ ಶಾಹಿನ್ ಚೌಹಾಣ (19),  ಬೇಬಿ ಮೊಯಿನುದ್ದೀನ್ ತಾಂಬೋಲಿ (50) ಮತ್ತು ಮಗುವಿನ ತಾಯಿ ಮನೀಶಾ ಸನ್ನಿ ಯಾದವ (32) ಬಂಧಿತರು. ಆರೋಪಿಗಳು ಮುಂಬೈ ನಗರದ ದಾದರ್ ಮತ್ತು ಸೇವ್ರಿ, ದಿವಾ, ವಡೋದರಾ ಮತ್ತು ಕಾರವಾರದವರಾಗಿದ್ದು, ಬಂಧಿತರಲ್ಲಿ ವಿವಾಹ ಆಯೋಜಕರು, ಆರೈಕೆದಾರರು ಮತ್ತು ಆಸ್ಪತ್ರೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ : ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಇನ್ನಿಲ್ಲ

ತನ್ನ ಸೊಸೆ ಮನೀಶಾ ಯಾದವ ತನ್ನ ನಾಲ್ಕು ತಿಂಗಳ ಮಗುವನ್ನು ಮಾರಾಟ ಮಾಡಿದ್ದಾಳೆ ಎಂದು  ಡಿಸೆಂಬರ್ ೧೧ ರಂದು ಸಿಯಾನ್-ಮಹೀಮ್ ಲಿಂಕ್ ರಸ್ತೆಯಲ್ಲಿ ವಾಸಿಸುವ ಮಗುವಿನ ಅಜ್ಜಿ ದೂರು ನೀಡಿದ್ದರು. ಆಗ ಈ ಮೂರು ರಾಜ್ಯಗಳ ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆ (child trafficking) ಪ್ರಕರಣ ಬೆಳಕಿಗೆ ಬಂದಿದೆ. ವಡೋದರಾದ ಮದೀನಾ ಚವ್ಹಾಣ್ ಮತ್ತು ತೈನಾಜ್ ಚೌಹಾಣ್ ಎಂಬುವರ ಸಹಾಯದಿಂದ ಮಗುವನ್ನು ೧ ಲಕ್ಷ ರೂಪಾಯಿಗೆ ಕರ್ನಾಟಕದ ಕಾರವಾರ ದಂಪತಿಗೆ ಮಾರಾಟ ಮಾಡಿರುವುದಾಗಿ ತಾಯಿ  ಮನೀಶಾ ಒಪ್ಪಿಕೊಂಡಿದ್ದಾಳೆ. ಉಳಿದ ಹಣ ಮಧ್ಯವರ್ತಿಗಳು ಪಾಲು ಮಾಡಿಕೊಂಡಿರುವ ಶಂಕೆ ಇದೆ. ಈ ಕುರಿತು ತನಿಖೆ ಮುಂದುವರೆದಿದೆ.

ವಿಡಿಯೋ ಸಹಿತ ಇದನ್ನೂ ಓದಿ : ಚಲಿಸುತ್ತಿದ್ದ ಶಾಲಾ ವಾಹನಕ್ಕೆ ಬೆಂಕಿ; ಮುಂದೇನಾಯ್ತು?

ಮುಂಬೈ (Mumbai) ನಗರ ಡಿಸಿಪಿ ರಾಗಸುಧಾ ಆರ್ ನೇತೃತ್ವದ ವಿಶೇಷ ತನಿಖಾ ತಂಡವು ವಿವಿಧ ರಾಜ್ಯಗಳಲ್ಲಿ ಸಮನ್ವಯ ಸಾಧಿಸಿ, ಮುಂಬೈ ನಗರ, ಥಾಣೆ, ವಡೋದರಾ ಮತ್ತು ಕಾರವಾರದಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕಡಿಮೆ ಆದಾಯದ ಕುಟುಂಬಗಳನ್ನು ಗುರಿಯಾಗಿಸಿ ಮಕ್ಕಳ ಮಾರಾಟ ದಂಧೆಯಲ್ಲಿ ತೊಡಗಿದ್ದರು.  ಆರೋಪಿಗಳು ಕನಿಷ್ಠ ಅರ್ಧ ಡಜನ್ ಮಕ್ಕಳನ್ನು ಕಳ್ಳಸಾಗಣೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.