ಬೆಳಗಾವಿ (Belagavi) : rudranna followup/ ನಾಲ್ಕು ತಿಂಗಳ ಹಿಂದೆ ವರ್ಗಾವಣೆ ವಿಚಾರದಲ್ಲಿ ೨ ಲಕ್ಷ ನಾನೇ ಕೊಟ್ಟಿದ್ದೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ಎಸ್ಡಿಸಿ ರುದ್ರಣ್ಣ (Rudranna) ಅವರ ತಾಯಿ ಮಲ್ಲವ್ವ ಯಡಣ್ಣವರ ಹೇಳಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾಧ್ಯಮದ ಜೊತೆ ಮಾತನಾಡಿರುವ ಅವರು, ನಿನ್ನೆ ರಾತ್ರಿ ರುದ್ರಣ್ಣ ಜೊತೆಗೆ ಕುಳಿತು ಊಟ ಮಾಡಿದೆ. ಊಟದ ಬಳಿಕ ಯಾರದೋ ಫೋನ್ ಬಂತು. ೨೦ ನಿಮಿಷ ಯಾರದೋ ಜೊತೆಗೆ ಮಾತನಾಡಿದ. ಬಳಿಕ ಆತ ಮಲಗಿದ, ನಾನೂ ಮಲಗಿದೆ. ಬೆಳಗ್ಗೆ ಮನೆಯಿಂದ ಎದ್ದು ಯಾವಾಗ ಹೋದ ಎಂಬುದೇ ಗೊತ್ತಾಗಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ದಿಢೀರ್ ವರ್ಗಾವಣೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ್ರಾ?
ನಾಲ್ಕು ತಿಂಗಳ ಹಿಂದೆ ವರ್ಗಾವಣೆ ವಿಚಾರದಲ್ಲಿ ೨ ಲಕ್ಷ ನಾನೇ ಕೊಟ್ಟಿದ್ದೆ. ಆ ಹಣ ಯಾರಿಗೆ ಕೊಟ್ಟ ಎಂಬುದು ನನಗೆ ಗೊತ್ತಿಲ್ಲ. ನನಗೆ ಇಬ್ಬರೇ ಮಕ್ಕಳು, ಇಬ್ಬರೂ ಸೆಟ್ಲ್ ಆಗಿದ್ದಾರೆ. ಕಚೇರಿಯಲ್ಲಿನ ವಿಷಯ ಮನೆಯಲ್ಲಿ ಮಾತನಾಡುತ್ತಿರಲಿಲ್ಲ ಎಂದ ಮಲ್ಲವ್ವ ಮಾಧ್ಯಮಕ್ಕೆ ಕಣ್ಣೀರಿಡುತ್ತಾ ತಿಳಿಸಿದ್ದಾರೆ (rudranna followup).
ಇದನ್ನೂ ಓದಿ : ಸಾವಿಗೆ ತಹಶೀಲ್ದಾರ, ಹೆಬ್ಬಾಳಕರ ಆಪ್ತ ಕಾರ್ಯದರ್ಶಿ ಕಾರಣರಾದ್ರಾ?