ಭಟ್ಕಳ (Bhatkal): ಒಣ ಮೀನು (dry fish) ಸಂಗ್ರಹಿಸಿಟ್ಟಿದ್ದ ಕಟ್ಟಡವನ್ನು ಜೆಸಿಬಿಯಿಂದ ಕೆಡವಿ ಲಕ್ಷಾಂತರ ರೂ. ನಷ್ಟ ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಾವಿನಕುರ್ವೆಯ ಚಿಬ್ಬಿಮನೆಯ ನಾರಾಯಣ ಎಂ.
ಮೊಗೇರ, ಲಕ್ಷಣ ಮಂಜುನಾಥ ಕರ್ಕಿಮನೆ ಮತ್ತು ಜೆಸಿಬಿ ಚಾಲಕ ಮಾವಿನಕಟ್ಟೆಯ ಗಣೇಶ ನಾಯ್ಕ ಆರೋಪಿತರು. ಭಟ್ಕಳ ತಾಲೂಕಿನ ಹೆಬಳೆ ಗಾಂಧಿನಗರದ ಕರಾಟೆ ಮಾಸ್ಟರ್ ಉಮೇಶ ರಾಮಾ ಮೊಗೇರ ದೂರು (complaint) ದಾಖಲಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳದ ದಾಳಿ ಬಗ್ಗೆ ಲೋಕಾಯುಕ್ತ ಎಸ್ಪಿ ಹೇಳಿದ್ದೇನು?
ಉಮೇಶ ಅವರು ತಂದೆಯವರ ಕಾಲದಿಂದ ತೆಂಗಿನಗುಂಡಿ ಬಂದರ ಹತ್ತಿರ ನದಿಯಿಂದ ಹೊರೆದುಬಂದ ಜಾಗದಲ್ಲಿ ಒಂದು ಕಟ್ಟಡ ಕಟ್ಟಿಕೊಂಡು ಅದರಲ್ಲಿ ಒಣಮೀನುಗಳನ್ನು ದಾಸ್ತಾನು ಮಾಡಿಕೊಂಡಿದ್ದರು. ಆ ಕಟ್ಟಡವನ್ನು ಕಳೆದ ೧೫-೧೬ ವರ್ಷಗಳಿಂದ ಉಮೇಶ ಮೊಗೇರ ದೇಖರಿಕೆ ಮಾಡಿಕೊಂಡು ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ವಿಡಿಯೋ ಸಹಿತ ಇದನ್ನೂ ಓದಿ : ಲೋಕಾಯುಕ್ತ ಬಲೆಗೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ಹೆಬಳೆ ಗ್ರಾಮ ಪಂಚಾಯತಿಗೆ ಕಟ್ಟಡದ ತೆರಿಗೆ ಪಾವತಿಸಲಾಗುತ್ತಿದೆ. ಈ ಕಟ್ಟಡದ ಮೇಲ್ಛಾವಣಿ ೨೦೧೭ನೇ ಇಸವಿಯಲ್ಲಿ ಹಾರಿಹೋಗಿತ್ತು. ಇದಕ್ಕೆ ಪ್ರಕೃತಿ ವಿಕೋಪ ನಿಧಿಯಿಂದ ೩೦ ಸಾವಿರ ರೂ. ಸರ್ಕಾರಿ ಪರಿಹಾರ ಪಡೆಯಲಾಗಿತ್ತು. ಕ್ಷೇತ್ರದ ಮೇಲೆ ಪೋರ್ಟ್ ಇಲಾಖೆ ಹೊರತುಪಡಿಸಿ ಯಾರಿಗೂ ಹಕ್ಕು ಇರುವುದಿಲ್ಲ. ಗ್ರಾಮ ಪಂಚಾಯತಿಗೆ ಭರಣ ಮಾಡಿದ ಟ್ಯಾಕ್ಸಲ್ಲಿ ಮನೆ ನಂ ೨೨೮ ಇರುತ್ತದೆ. ಇವೆಲ್ಲಾ ದಾಖಲೆಗಳು ಇದ್ದರೂ ಕಟ್ಟಡ ಧ್ವಂಸ ಮಾಡಿದ್ದಾರೆ ಎಂದು ಉಮೇಶ ದೂರಿದ್ದಾರೆ.
ಇದನ್ನೂ ಓದಿ : ಚುಟುಕು ಕ್ರೀಡಾ ಹಬ್ಬದಲ್ಲಿ ಮಕ್ಕಳ ಕಲರವ
ಅ.೨೬ರಂದು ಬೆಳಿಗ್ಗೆ ೬ ಗಂಟೆಯ ಸುಮಾರಿಗೆ ಆರೋಪಿತರು ಸೇರಿ ಏಕಾಏಕಿ ತಮ್ಮ ಕಟ್ಟಡವನ್ನು ಜೆ.ಸಿ.ಬಿ.ಯಿಂದ ಕೆಡವಿ ಹಾಕಿದ್ದಾರೆ. ಪೋರ್ಟ್ ಇಲಾಖೆಯಿಂದ ಅನುಮತಿ ಪಡೆಯದೆ ಕಟ್ಟಡದ ಒಳಗಿರುವ ಟೇಬಲ್, ಬುಟ್ಟಿ, ದಾಸ್ತಾನು ಇಟ್ಟ ಒಣ ಮೀನುಗಳನ್ನು ಪುಡಿ ಮಾಡಿದ್ದಾರೆ. ಜೆ.ಸಿ.ಬಿ. ಯಂತ್ರದ ಸಹಾಯದಿಂದ ಮಣ್ಣಿನಡಿ ಹಾಕುವುದಾಗಿ ಜೀವದ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಉಸ್ತುವಾರಿಯಿಂದ ವಸತಿ ನಿಲಯಗಳ ಪರಿಶೀಲನೆ
ಅರ್ಜಿಯನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎನ್.ಸಿ. ನಂ-೧೦೯/೨೦೨೪ ದಾಖಲಿಸಲಾಗಿತ್ತು. ನಂತರ ಫಿರ‍್ಯಾದಿಯು ನ್ಯಾಯಾಲಯದಿಂದ ಎಫ್.ಐ.ಆರ್. (FIR) ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಪಡೆದ ಅನುಮತಿ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಭಟ್ಕಳದಲ್ಲಿ ನೌಕರರ ವರ್ಗಾವಣೆಗೆ ಆಗ್ರಹಿಸಿ ಮತ್ತೆ ಪ್ರತಿಭಟನೆ