ಭಟ್ಕಳ (Bhatkal: ಆಳ ಸಮುದ್ರ ಮೀನುಗಾರಿಕೆಗೆ ಹೋದ ಮೀನುಗಾರ ಯುವಕ ಅಕಸ್ಮಾತ್ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಬಗ್ಗೆ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೆಬಳೆಯ ಸಂಪನಕೇರಿ ಬಬ್ಬನಕಲ್ ನಿವಾಸಿ ಮಾಸ್ತಿ ಸುಕ್ರ ಗೊಂಡ (೩೧) ಮೃತ ದುರ್ದೈವಿ. ಈವರು ಸುಶೀಲಾ ಎಂಬ ಹೆಸರಿನ ಟ್ರೋಲ್ ಬೋಟಿನಲ್ಲಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿದ್ದರು. ಡಿ.೭ರಂದು ನಸುಕಿನ ಜಾವ ೪.೩೦ರ ಸುಮಾರಿಗೆ ಅಕಸ್ಮಾತ್ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇವರ ಮೃತದೇಹವು ಸಂಜೆ ೫ರ ಸುಮಾರಿಗೆ ಅರಬ್ಬಿ ಸಮುದ್ರದಲ್ಲಿ ಸಿಕ್ಕಿದೆ ಎಂದು ಮೃತರ ಸೋದರ ಮಾವ ಮಾದೇವ ಗೊಂಡ ದೂರಿನಲ್ಲಿ ತಿಳಿಸಿದ್ದಾರೆ. ಭಟ್ಕಳ (Bhatkal) ಗ್ರಾಮೀಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಶಾಲಾ ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ