ಭಟ್ಕಳ ಡೈರಿ ವರದಿ

ಭಟ್ಕಳ: ಶ್ರೀ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಅಕ್ಟೋಬರ್ ೧೧ರಿಂದ ೨೦ರವರೆಗೆ ಶರನ್ನವರಾತ್ರಿ ಉತ್ಸವವು ನಡೆಯಲಿದೆ. ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಈ ಪರ್ವಕಾಲದ ಉತ್ಸವವು ಅಕ್ಟೋಬರ್ ೧೧ರಂದು ಘಟಸ್ಥಾಪನೆಯೊಂದಿಗೆ ಆರಂಭವಾಗಲಿದೆ.

ಉತ್ಸವದ ಅಂಗವಾಗಿ ಪ್ರತಿದಿನ ಶ್ರೀದೇವಿ ಪಾರಾಯಣ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆಯೂ ಇರಲಿದೆ.

ಅಕ್ಟೋಬರ್ ೨೦ರಂದು ವಿಜಯದಶಮಿಯ ಪ್ರಯುಕ್ತ ನವಚಂಡಿಕಾ ಹೋಮ, ಕುಮಾರಿಕಾ ಬಾಗಿನ ಪೂಜೆ, ದಂಪತಿ ಬಾಗಿನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶರನ್ನವರಾತ್ರಿ ಉತ್ಸವದ ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀದೇವಿಯ ಮುಡಿಗಂಧ ಪ್ರಸಾದ ಸ್ವೀಕರಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ದೇವಾಲಯದ ಧರ್ಮದರ್ಶಿಗಳು ಮನವಿ ಮಾಡಿದ್ದಾರೆ. ನವರಾತ್ರಿ ಪರ್ವಕಾಲದಲ್ಲಿ ಶ್ರೀದೇವಿಯ ಸನ್ನಿಧಿಯಲ್ಲಿ ವಿಶೇಷ ಸೇವೆಗಳು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಭಕ್ತಾದಿಗಳು ೮೩೧೦೦೯೩೧೯೮ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

ಇದನ್ನೂ ಓದಿ :

ಭಟ್ಕಳದಲ್ಲಿ ಮಳೆಯ ಸಾಧ್ಯತೆ ಮುಂದುವರಿಕೆ; ಅ.೧೦ರವರೆಗೆ ಕರಾವಳಿಯಲ್ಲಿ ಮಳೆ-ಗುಡುಗು ಮುನ್ಸೂಚನೆ

ಭಟ್ಕಳಕ್ಕೆ ಉಪ ಬಂಧಿಖಾನೆ ಯಾವಾಗ? ಪೊಲೀಸ್ ವ್ಯವಸ್ಥೆ, ಬಂಧಿತರ ಕುಟುಂಬಗಳ ಸಂಕಷ್ಟಕ್ಕೆ ಪರಿಹಾರ ಬೇಕು