ಕಾರವಾರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಜೆಇಇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (Competitive Exams) ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಅನೀಶ್ ನಾಯ್ಕ ಅವರಿಗೆ ಧಾರವಾಡದ (Dharwad) ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಕಾರವಾರದ (Karwar) ಬಾಲ ಮಂದಿರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಅಭಿನಂದನಾ ಸಮಾರಂಭ ನಡೆಯಿತು (Felicitated).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅನೀಶ್ ನಾಯ್ಕ ಅವರು ಪಿಯುಸಿಯಲ್ಲಿ ೯೬% ಅಂಕ, ಜೆಇಇ ಮೇನ್ಸ್‌ನಲ್ಲಿ (JEE mains) ೯೯.೫೬%, ಜೆಇಇ ಅಡ್ವಾನ್ಸ್‌ನಲ್ಲಿ (JEE advance) ೫೮೦೯ನೇ ರ‍್ಯಾಂಕ್, ಕರ್ನಾಟಕ ಸಿಇಟಿಯಲ್ಲಿ (KCET) ೮೯೨ನೇ ರ‍್ಯಾಂಕ್, ಎಸ್‌ಒಎಫ್ ಇಂಟರ್‌ನ್ಯಾಷನಲ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ೧೮೯ನೇ ರ‍್ಯಾಂಕ್, ಝೋನಲ್ ಮಟ್ಟದಲ್ಲಿ ೧೦ನೇ ರ‍್ಯಾಂಕ್ ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಸ್ಟೇಜ್-1 ಪರೀಕ್ಷೆಯಲ್ಲಿ ಅರ್ಹತೆ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

Government School/ ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ: ಒಂದಾದ ಹಳೆಯ ವಿದ್ಯಾರ್ಥಿಗಳು

ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲ ಮಂದಿರ ಶಾಲೆಯ ಮುಖ್ಯೋಪಾಧ್ಯಾಯೆ ಅಂಜಲಿ ಮಾನೆ, ಶಾಲಾ ದಿನಗಳಿಂದಲೇ ಅನೀಶ್ ಅವರ ಪರಿಶ್ರಮ, ಶಿಸ್ತು, ಉತ್ತಮ ನಡವಳಿಕೆ ಹಾಗೂ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಗುಣಗಳು ಇಂದಿನ ಯಶಸ್ಸಿಗೆ ಕಾರಣವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

AB-RK project/ ಎಬಿ-ಆರ್ಕೆ ಯೋಜನೆಯ ಪ್ರಗತಿಯಲ್ಲಿ ಭಟ್ಕಳ ಆಸ್ಪತ್ರೆ ಜಿಲ್ಲೆಗೆ ಪ್ರಥಮ

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನೀಶ್ ನಾಯ್ಕ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಒಂದು ದಿನದ ಪ್ರಯತ್ನದಿಂದ ಸಾಧ್ಯವಲ್ಲ. ನಿರಂತರ ಪರಿಶ್ರಮ, ವಿಷಯದ ಮೇಲಿನ ಹಿಡಿತ, ಶಿಕ್ಷಕರ ಮಾರ್ಗದರ್ಶನ ಹಾಗೂ ಶಿಸ್ತುಬದ್ಧ ಅಧ್ಯಯನವೇ ಯಶಸ್ಸಿನ ಗುಟ್ಟು ಎಂದು ಕಿರಿಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಮ್ಮ ಸಾಧನೆಗೆ ತಂದೆ-ತಾಯಿ, ಅರ್ಜುನ ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರ ಪ್ರೋತ್ಸಾಹವೇ ಪ್ರಮುಖ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

RNSPU College/ ಆರ್‌ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರಂಭ

ಕಾರ್ಯಕ್ರಮದಲ್ಲಿ ಅರ್ಜುನ ಶಿಕ್ಷಣ ಸಂಸ್ಥೆಯ ನಿರ್ದೇಶಕರು, ಬಾಲ ಮಂದಿರ ಶಾಲೆಯ ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಯ ಪಾಲಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಅನೀಶ್ ನಾಯ್ಕ ಅವರು ಹೊನ್ನಾವರ (Honnavar) ಮೂಲದ ಜೀ ಕನ್ನಡ ನ್ಯೂಸ್‌ನ (Zee Kannada News) ಉತ್ತರ ಕನ್ನಡ (Uttara Kannada) ಜಿಲ್ಲಾ ವರದಿಗಾರ ಕಡತೋಕ ಮಂಜು ಅವರ ಪುತ್ರರಾಗಿದ್ದು, ತಾಯಿ ಶ್ವೇತಾ ನಾಯ್ಕ ಶಿಕ್ಷಕಿಯಾಗಿದ್ದಾರೆ.

Various problems/ ಆಜಾದ್ ನಗರದಲ್ಲಿ ನಾನಾ ಸಮಸ್ಯೆ: ಏಳನೇ ಕ್ರಾಸ್ ನಿವಾಸಿಗಳ ಪರದಾಟ