ಭಟ್ಕಳ (Bhatkal) : ಮೈಸೂರಲ್ಲಿ  (Mysuru) ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ (Kick Boxing) ಸ್ಪರ್ಧೆಯಲ್ಲಿ ಉತ್ತರ ಕನ್ನಡ (uttarakannada) ಜಿಲ್ಲೆಯ ಭಟ್ಕಳ ತಾಲೂಕಿನ ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಕಿಕ್ ಬಾಕ್ಸಿಂಗ್ (Kick Boxing) ವಿದ್ಯಾರ್ಥಿಗಳು ಭಾಗವಹಿಸಿ, ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೭ ರಿಂದ ೯ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮಹಮ್ಮದ್ ರಯ್ಯಾನ್ -೨೮ಕೆಜಿ ಪಾಯಿಂಟ್ ಫೈಟ್ ಮತ್ತು ಕ್ರಿಯೇಟಿವ್ ಫಾರ್ಮ್ ವೆಪನ್ ಟೀಮ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ -೨೨ ಕೆಜಿ ಪಾಯಿಂಟ್ ಫೈಟ್ ಮತ್ತು ಕ್ರಿಯೇಟಿವ್ ಫಾರ್ಮ್ ವೆಪನ್ ಟೀಮ್ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಸಾನ್ವಿ ಚಂದ್ರ ನಾಯ್ಕ -೨೮ ಕೆಜಿ ಪಾಯಿಂಟ್ ಫೈಟ್ ಮತ್ತು ಕ್ರಿಯೇಟಿವ್ ಫಾರ್ಮ್ ವೆಪನ್ ಟೀಮ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಇದನ್ನು ಓದಿ : cash detect/ ಅನುಮಾನಾಸ್ಪದ ಕಾರಿನಲ್ಲಿ ೧.೧೪ ಕೋಟಿ ರೂ. ಪತ್ತೆ

ಭಾನುಶ್ರೀ ಅಶೋಕ್ ನಾಯ್ಕ -೩೨ ಕೆಜಿ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ ತನ್ನದಾಗಿಸಿಕೊಂಡಿದ್ದಾರೆ. ೧೦ ರಿಂದ ೧೨ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಆಧ್ಯಾ ರವಿ ನಾಯ್ಕ ಪಾಯಿಂಟ್ ಫೈಟ್ -೨೮ ಕೆಜಿ ಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. -೩೨ಕೆಜಿಯಲ್ಲಿ ಅಂಕಿತಾ ನಾಗಪ್ಪ ನಾಯ್ಕ ಚಿನ್ನದ ಪದಕ, -೩೭ ಕೆಜಿಯಲ್ಲಿ ಮನಾಲಿ ರಾಜು ನಾಯ್ಕ ಕಂಚಿನ ಪದಕ ಗಳಿಸಿದ್ದಾರೆ.

ಇದನ್ನು ಓದಿ : Two Arrested/ ನ್ಯಾಯಾಂಗ ಬಂಧನದಲ್ಲಿ ಲಾರಿ ಚಾಲಕ-ಮಾಲಕ

ಬಾಲಕರ ವಿಭಾಗದ -೨೮ ಕೆಜಿಯ ಪಾಯಿಂಟ್ ಫೈಟ್ ನಲ್ಲಿ ರೆಹಾನ್ ಖಾನ್ ಅಬ್ದುಲ್ ಕರೀಮ್ ಚಿನ್ನದ ಪದಕ ಮತ್ತು ಶಿವ ಸಂತೋಷ ನಾಯ್ಕ +೪೭ಕೆಜಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ೧೩ ರಿಂದ ೧೫ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ -೨೮ ಕೆಜಿ ಪಾಯಿಂಟ್ ಫೈಟ್ ನಲ್ಲಿ ಸಮೀಕ್ಷಾ ಮಾಸ್ತಿ ಗೊಂಡ ಚಿನ್ನದ ಪದಕ ಮತ್ತು -೩೭ ಕೆಜಿಯಲ್ಲಿ ಸಾನಿಕಾ ವೆಂಕಟ್ರಮಣ ಮೊಗೇರ ಬೆಳ್ಳಿಯ ಪದಕ ಗೆದ್ದಿದ್ದಾರೆ.

ಇದನ್ನು ಓದಿ : Hogevaddi/ ಹೊಗೆವಡ್ಡಿಯಲ್ಲಿ ಜಾತ್ರಾ ಮಹೋತ್ಸವ ಫೆ.೬ರಿಂದ

ಬಾಲಕರ ವಿಭಾಗದ -೪೭ಕೆಜಿಯಲ್ಲಿ ಯಶಸ್ ವಾಮನ ಮೊಗೇರ ಬೆಳ್ಳಿಯ ಪದಕ, -೬೯ಕೆಜಿಯಲ್ಲಿ ರತನ್ ಲಕ್ಷ್ಮಣ ಪಾವಸ್ಕರ್ ಚಿನ್ನದ ಪದಕ ಗಳಿಸಿದ್ದಾರೆ. ೧೬ ರಿಂದ ೧೮ ವರ್ಷ ವಯೋಮಿತಿಯ ಬಾಲಕಿಯರ -೪೫ಕೆಜಿಯ ಪಾಯಿಂಟ್ ಫೈಟ್ ಮತ್ತು ಲೈಟ್ ಕಾಂಟ್ಯಾಕ್ಟ್ ನಲ್ಲಿ ಲಿಖಿತಾ ಶಂಕರ ನಾಯ್ಕ ಚಿನ್ನದ ಪದಕ ಗಳಿಸಿದ್ದಾರೆ.
ಈ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉತ್ತರ ಕನ್ನಡ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ಎನ್. ನಾಯ್ಕ ಮತ್ತು ಕಿಕ್ ಬಾಕ್ಸಿಂಗ್ ನ ಮುಖ್ಯ ಕೋಚ್ ನಾಗಶ್ರೀ ನಾಯ್ಕ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯ ವಿಡಿಯೋವನ್ನು  ಯೂಟ್ಯೂಬ್ಇನ್ಸ್ಟಾಗ್ರಾಂ ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನು ಓದಿ : Urban Bank/ ನಾಲ್ವರು ಅವಿರೋಧ ಆಯ್ಕೆ