ಭಟ್ಕಳ (Bhatkal) : ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಕಿಡಿಗೇಡಿಗಳಿಗೆ ಯಾರು ಕೂಡ ಊಹಿಸಿದಂತಹ ಕಠಿಣ ಶಿಕ್ಷೆಯಾಗಬೇಕು ಹಾಗೂ ಈ ಶಿಕ್ಷೆ ಇಂಥಹ ಕೃತ್ಯ ಎಸಗುವ ಕಿಡಿಗೇಡಿಗಳಿಗೆ ಪಾಠವಾಗಬೇಕು ಎಂದು ಯಂಗ್ ಒನ್ ಇಂಡಿಯಾ ಮಾಲೀಕ ಮಾಸ್ತಪ್ಪ ನಾಯ್ಕ ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಾರತ ದೇಶದಲ್ಲಿ ಗೋವುಗಳಿಗೆ ಪೂಜ್ಯನೀಯ ಸ್ಥಾನವಿದೆ. ಗೋವಿನಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆಂದು ಪ್ರಬಲವಾಗಿ ನಂಬಿದ್ದೇವೆ. ಅದೇ ರೀತಿ
ಈ ಜಗತ್ತಿನಲ್ಲಿ ಗೋ ಮಾತೆ ಹಾಗೂ ತಾಯಿಯ ಹಾಲು ಕುಡಿಯದೆ ಇದ್ದವರು ಯಾರು ಇಲ್ಲ. ಆದರೆ ಕೆಲ ದಿನಗಳ ಹಿಂದಷ್ಟೇ ನಾವು ಪೂಜಿಸಿ ಆರಾಧಿಸುವ ಗೋವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಈ ರೀತಿ ವಿಕೃತ ಮನಸ್ಥಿತಿಯವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನು ಓದಿ : Sodigadde/ ಗೊಂಬೆ ಅರ್ಪಿಸಿ ಹರಕೆ ತೀರಿಸಿದ ಭಕ್ತರು
ಕಠಿಣ ಶಿಕ್ಷೆ ಇಂತಹ ಕಟುಕರಿಗೆ ಪಾಠವಾಗಬೇಕು. ಅದೇ ರೀತಿ ಮುಂದಿನ ದಿನಗಳಲ್ಲಿ ಯಾರು ಕೂಡ ಈ ರೀತಿ ಕೆಲಸಕ್ಕೆ ಕೈ ಹಾಕದಂತೆ ಶಿಕ್ಷೆಯಾಗಬೇಕು. ಯಾರು ಕೂಡ ಊಹಿಸಿದಂತಹ ಕಠಿಣ ಶಿಕ್ಷೆಯಾಗಬೇಕು ಹಾಗೂ ಈ ಶಿಕ್ಷೆ ಇಂಥಹ ಕೃತ್ಯ ಎಸಗುವ ಕಿಡಿಗೇಡಿಗಳಿಗೆ ಪಾಠವಾಗಬೇಕು ಎಂದು ಯಂಗ್ ಒನ್ ಇಂಡಿಯಾ ಮಾಲೀಕ, ಭಟ್ಕಳದ (Bhatkal) ಮಾಸ್ತಪ್ಪ ನಾಯ್ಕ ಹೇಳಿಕೆ ನೀಡಿದ್ದಾರೆ.
ಇದರ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನು ಓದಿ : Golden Girls/ ಚಿನ್ನದ ಹುಡುಗಿಯರು ಇವರು