ಭಟ್ಕಳ (Bhatkal): ಬೈಂದೂರಿನಲ್ಲಿ (Byndoor) ರಾಷ್ಟ್ರೀಯ ಹೆದ್ದಾರಿ (National Highway) ೬೬ರಲ್ಲಿ ಟಿಪ್ಪರ್ ಲಾರಿಗೆ (Tipper) ಸ್ಕೂಟರ್ (Scooter) ಡಿಕ್ಕಿ ಹೊಡೆದ (Accident) ಪರಿಣಾಮ ೯ ವರ್ಷದ ಮಗು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ೭.೩೦ರ ಸುಮಾರಿಗೆ ಭಟ್ಕಳದಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಹೊಳೆ ಕ್ರಾಸ್‌ನಲ್ಲಿ ಅಪಘಾತ (Accident) ಸಂಭವಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ಜಾಲಿ ರಸ್ತೆಯ ಮೊಹಮ್ಮದ್ ಇಸಾ ಶಾಬಂದ್ರಿ (35) ತನ್ನ ಪತ್ನಿ ಶಾಹೀನ್ ಮತ್ತು ಅವರ ಒಂಭತ್ತು ವರ್ಷದ ಮಗ ಇಶಾಕ್ ಅವರೊಂದಿಗೆ ಉಡುಪಿಯಲ್ಲಿ (Udupi) ವೈದ್ಯರನ್ನು ಭೇಟಿ ಮಾಡಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಬೈಂದೂರು ದಾಟಿದ ನಂತರ ಸುಮಾರು ೧೦ ಕಿಲೋಮೀಟರ್ ದೂರದಲ್ಲಿ ಟಿಪ್ಪರ್ ಲಾರಿಯೊಂದು ಸಿಗ್ನಲ್ ನೀಡದೆ ಏಕಾಏಕಿ ತಿರುವು ಪಡೆದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ವಿಜೃಂಭಣೆಯಿಂದ ನಡೆದ ವಿದ್ಯೋತ್ಸವ
ಗಾಯಗೊಂಡ ಮೂವರನ್ನು ಕುಂದಾಪುರ (Kundapur) ಆಸ್ಪತ್ರೆಗೆ ರವಾನಿಸಲಾಗಿತ್ತು. ತಲೆಗೆ ತೀವ್ರವಾಗಿ ಗಾಯಗೊಂಡ ಒಂಭತ್ತು ವರ್ಷದ ಇಶಾಕ್‌ನನ್ನು ನಂತರ ಮಣಿಪಾಲ (Manipal) ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಅವನ ಸ್ಥಿತಿ ಗಂಭೀರವಾಗಿದೆ. ಕೈಕಾಲುಗಳಿಗೆ ಗಾಯಗಳಾಗಿರುವ ಇಸಾ ಅವರನ್ನು ಕುಂದಾಪುರದಿಂದ ಮಂಗಳೂರಿಗೆ (Mangaluru) ಸ್ಥಳಾಂತರಿಸಲಾಗಿದೆ.. ಇಸಾ ಅವರ ಪತ್ನಿ ಶಾಹೀನ್ ಕೈಗೂ ಗಾಯಗಳಾಗಿದ್ದು, ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಉತ್ತರ ಕನ್ನಡ ಸಹಿತ ಕೆಲವೆಡೆ ಮಳೆ ಸಾಧ್ಯತೆ