ಭಟ್ಕಳ (Bhatkal) : ಇಲ್ಲಿನ ನ್ಯಾಯಾಲಯದ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ (National Highway) ನಿನ್ನೆ ಬುಧವಾರ ಸಂಜೆ ೫ ಗಂಟೆ ಸುಮಾರಿಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿಯೊಬ್ಬರು ಸಾವನ್ನಪ್ಪಿದ್ದಾರೆ (pedestrian died). ಮೃತರನ್ನು ಭಟ್ಕಳದ ಕೋಗ್ತಿ ನಗರದ ೨ನೇ ಕ್ರಾಸ್ ನಿವಾಸಿ ಹುಸೇನ್ ಶಬ್ಬಿರ್ ತಂದೆ ಇಸ್ಮಾಯಿಲ್ ಅಬ್ದುಲ್ ಗನಿ (೬೪) ಎಂದು ಗುರುತಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರಸ್ತೆ ದಾಟುತ್ತಿದ್ದ ಹುಸೇನ್ ಶಬ್ಬೀರ್ ಅವರಿಗೆ ಹೊನ್ನಾವರ (Honnavar) ಕಡೆಯಿಂದ ಭಟ್ಕಳ ಕಡೆಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ ಎಂದು ದೂರಲಾಗಿದೆ. ತಲೆಗೆ ತೀವ್ರ ಗಾಯಗೊಂಡಿದ್ದ ಅವರನ್ನು ಕೂಡಲೇ ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ೧೦.೨೫ರ ಸುಮಾರಿಗೆ ಮೃತಪಟ್ಟಿದ್ದಾರೆ (pedestrian died). ಬೈಕ್ ಸವಾರ ಖಾಜಿಯಾ ಸ್ಟ್ರೀಟ್‌ನ ಮುಸ್ಬಾ ಹೌಸ್ ನಿವಾಸಿ ಅಬ್ದುಲ್ ಅಲಿಂ ತಂದೆ ಮಹ್ಮದ್ ಇಕ್ಬಾಲ್ ಶೇಖ್ ವಿರುದ್ಧ ಫಿರ್ದೋಸ್ ನಗರದ ಬಾವಾ ಅಮೀರ ತಂದೆ ಇಮಾಮ್ ಬಂಟ್ವಾಳ (೪೭) ದೂರು (complaint) ದಾಖಲಿಸಿದ್ದಾರೆ. ಭಟ್ಕಳ ನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು (case registered), ಮುಂದಿನ ತನಿಖೆ ಕೈಗೊಂಡಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ