ಭಟ್ಕಳ (Bhatkal) : ಟ್ಯಾಂಕರ್‌ ಡಿಕ್ಕಿಯಾಗಿ (Tanker Collision) ಮೋಟಾರ್‌ ಸೈಕಲ್‌ ಸವಾರ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ವೆಂಕಟಾಪುರ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಮಾ.೧೨ರಂದು ಬೆಳಿಗ್ಗೆ ೧೦.೧೫ರ ಸುಮಾರಿಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ (Honnavar) ತಾಲೂಕಿನ ಮಂಕಿಯ ನೂರ್‌ ಮೊಹಲ್ಲಾ ನಿವಾಸಿ, ಮೀನುಗಾರಿಕೆ ವೃತ್ತಿ ಮಾಡುವ ಅರ್ಷದ್‌ ಮೊಹಮ್ಮದ್‌ ಇಕ್ಬಾಲ್‌ ಬೋಟ್ಲೇರ್‌ (೨೩) ಗಾಯಗೊಂಡವರು. ಹೊನ್ನಾವರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಮೋಟಾರ್‌ ಸೈಕಲ್‌ ಬಲಗಡೆಗೆ ಎದುರಿನಿಂದ ಬರುತ್ತಿದ್ದ ಟ್ಯಾಂಕರ್‌ ಡಿಕ್ಕಿ ಹೊಡೆದಿದೆ (Tanker Collision). ಗಾಯಗೊಂಡ ಬೈಕ್‌ ಸವಾರನಿಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ (Mangaluru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್‌ ಚಾಲಕ ತಮಿಳುನಾಡಿನ (Tamilnadu) ತಿರುಚಿರಪಳ್ಳಿಯ ಸರವರನ್‌ ಮುರುಗೇಸನ್‌ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (Complaint) ದಾಖಲಾಗಿದೆ.

ಇದನ್ನೂ ಓದಿ : Panchganga Express/ ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ೫ರ ಸಂಭ್ರಮ