ಭಟ್ಕಳ (Bhatkal): ಭಟ್ಕಳ ಕ್ಷೇತ್ರ ಈಗ ಸೂತ್ರವಿಲ್ಲದ ಗಾಳಿ ಪಟದಂತಾಗಿದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ (Sunil Naik) ಬೇಸರ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಇಲ್ಲಿನ ನಿಶ್ಚಲಮಕ್ಕಿ ಶ್ರೀ ವೆಂಕಟರಮಣ ಸಭಾಭವನದಲ್ಲಿ ನಡೆದ ಬಿಜೆಪಿ ಮಂಡಲ ಕಾರ್ಯಕಾರಿಣಿ ವಿಶೇಷ ಸಭೆಯ ಸದಸ್ಯತ್ವ ಅಭಿಯಾನ (Membership campaign) ಕಾರ್ಯಾಗಾರದಲ್ಲಿ ಮಾತನಾಡಿದರು. ಅರಣ್ಯ ಇಲಾಖೆಯವರು ಕಳೆದ ೨೫ ರಿಂದ ೩೦ ವರ್ಷಗಳ ಕಾಲ ವಾಸ ಮಾಡುತ್ತಿರುವ ಮನೆ ಹಾಗೂ ತೋಟಗಳನ್ನು ದ್ವಂಸ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ನಮ್ಮ ಭಟ್ಕಳ ಸೂತ್ರವಿಲ್ಲದ ಗಾಳಿ ಪಟದಂತೆ ಆಗಿದೆ. ಹೊಸ ಅತಿಕ್ರಮಣವನ್ನು ಖುಲ್ಲಾ ಪಡಿಸಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ೨೫ – ೩೦ ವರ್ಷಗಳಿಂದ ವಾಸ ಮಾಡುತ್ತಿರುವವರ ಮನೆ, ತೋಟ ಧ್ವಂಸ ಮಾಡುತ್ತಿರುವುದು ಖಂಡನೀಯ ಎಂದರು.

ಇದನ್ನೂ ಓದಿ : ರೈಲ್ವೆ ನಿಲ್ದಾಣದಲ್ಲಿ ಟ್ಯಾಕ್ಸಿ ಸ್ಟ್ಯಾಂಡ್‌ ನಿರ್ಮಾಣಕ್ಕೆ ಮನವಿ

ನಮ್ಮ ಸರ್ಕಾರ ಇದ್ದ ವೇಳೆ ಸಾಮಾನ್ಯವಾಗಿ ೧೦ ದಿನ ರೇತಿ ಬಂದ್ ಆಗುತ್ತಿರಲಿಲ್ಲ. ಆದರೆ ಈಗ ಕಳೆದ ಒಂದು ವರ್ಷದಿಂದ ತಾಲೂಕಿನಲ್ಲಿ ರೇತಿ ಸಾಗಣೆ ಕೂಡ ನಿಂತು ಹೋಗಿದೆ. ಇದರಿಂದಾಗಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇದರಿಂದಾಗಿ ಜನರು ದಿನನಿತ್ಯದ ಜೀವನ ನಡೆಸಲು ಕಷ್ಟ ಪಡುವಂತಾಗಿದೆ ಎಂದು ಸುನೀಲ ನಾಯ್ಕ (Sunil Naik) ಹೇಳಿದರು.

ಇದನ್ನೂ ಓದಿ : ಆನಂದಾಶ್ರಮ ಕಾನ್ವೆಂಟ್ ಪ್ರೌಢಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಜಾಲಿ ಪ.ಪಂ.ನಲ್ಲಿ ನಮ್ಮ ಪಕ್ಷದ ಸದಸ್ಯರಿಗೆ ಅನುದಾನ ಹಂಚುವಲ್ಲಿ ತಾರತಮ್ಯ ಆಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಿ ಧರಣಿಗೆ ಕುಳಿತುಕೊಂಡರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಕಾರ್ಯಕರ್ತರಿಗೆ ಮತ್ತು ಪ.ಪಂ. ಸದಸ್ಯರಿಗೆ ನಾನು ಶಾಸಕನಿರುವಾಗ ಯಾರಿಗೂ ತಾರತಮ್ಯ ಮಾಡಿಲ್ಲ. ಎಲ್ಲಾ ವಾರ್ಡ್ ಗಳಿಗೂ  ಪಕ್ಷಾತೀತವಾಗಿ ಅನುದಾನ ಹಂಚುವ ಕೆಲಸ ಮಾಡಿದ್ದೇನೆ. ಯಾಕೆಂದರೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೋಗುವುದು ನಮ್ಮ ಪದ್ದತಿ. ನಾನು ಭಾರತೀಯ ಜನತಾ ಪಾರ್ಟಿಯ ಶಾಸಕನಾದ ಮೇಲೆ ನಾವು ಕಾಂಗ್ರೆಸ್ ಪಕ್ಷದವರನ್ನು ವಿಂಗಡಣೆ ಮಾಡಲು ಸಾಧ್ಯವಾಗುವುದಿಲ್ಲ. ನಾವು ಗೆಲುವು ಸಾಧಿಸಿದ ನಂತರ ನಮಗೆ ಎಲ್ಲರೂ ಒಂದೇ ಆಗಿರುತ್ತಾರೆ. ಆ ದಿಸೆಯಲ್ಲಿ ಎಲ್ಲಾ ಭಾಗಕ್ಕೂ ಅನುದಾನ ನೀಡಿದ್ದೇನೆ. ಆದರೆ ಈಗ ನಮ್ಮ ಕಾರ್ಯಕರ್ತರು ಗೆಲುವು ಸಾಧಿಸಿದ ಮೂರು ವಾರ್ಡ್ ಗಳಿಗೆ ಒಂದು ನಯಾ ಪೈಸೆಯನ್ನೂ ನಮ್ಮ ಸಚಿವರು ಕೊಡದೆ ಇರುವ ಕೆಲಸ ಮಾಡಿದ್ದಾರೆ. ಅದು ಯಾವ ರೀತಿ ಅಂದರೆ ಅಂಧಾ ಕಾನೂನು. ನಾವು ನಡೆದದ್ದೇ ದಾರಿ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ : ಮೃತ ಬೈಕ್‌ ಸವಾರ ಸಹಿತ ಲಾರಿ ಚಾಲಕನ ವಿರುದ್ಧ ದೂರು

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎನ್.ಎಸ್. ಹೆಗಡೆ, ಭಟ್ಕಳ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಸರಕೇರಿ, ಜಿಲ್ಲಾ ಪ್ರಮುಖ ಪ್ರಶಾಂತ ನಾಯ್ಕ, ರಾಜೇಶ ನಾಯ್ಕ, ಜಿಲ್ಲಾ ಮಹಿಳಾ ಪ್ರಮುಖ ಸವಿತಾ ಗೊಂಡ ಉಪಸ್ಥಿತರಿದ್ದರು.

ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳ ಕಾರ್ಯಾಲಯ ಉದ್ಘಾಟನೆ