ಭಟ್ಕಳ (Bhatkal) : ರಾಜ್ಯದ ಕಾಂಗ್ರೆಸ್ (Congress) ಸರಕಾರದ ದುರಾಡಳಿತ, ಬಸ್ ದರ ಏರಿಕೆ  ಹಾಗೂ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಆತ್ಮಹತ್ಯೆ ಖಂಡಿಸಿ ಭಟ್ಕಳ ಬಿಜೆಪಿ (BJP) ಮಂಡಲ ವತಿಯಿಂದ ಸಹಾಯಕ ಅಯುಕ್ತರಿಗೆ ಮನವಿ (Memorandum) ಸಲ್ಲಿಸಲಾಗಿದೆ. ಭಟ್ಕಳ ಸಹಾಯಕ ಆಯುಕ್ತರ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, ಕಾಂಗ್ರೆಸ್ ತೆರಿಗೆ ಹಣದಲ್ಲಿ ಸರ್ಕಾರ ನಡೆಸುವ ಪರಿಸ್ಥಿತಿಯಲ್ಲಿ ಇಲ್ಲ. ಈ ಕಾರಣಕ್ಕೆ ದರ ಏರಿಸುವುದನ್ನು ಬಿಟ್ಟರೆ ಅವರಿಗೆ ಬೇರೆ ಪರ್ಯಾಯ ದಾರಿ ಇಲ್ಲವಾಗಿದೆ. ಜನರಿಗೆ ಸರ್ಕಾರ ಯಾವ ರೀತಿ ಗಾಯದ ಮೇಲೆ ಬರೆ ಎಳೆಯುತ್ತಿದೆ ಅಂದರೆ ಅವರು ಪ್ರಶ್ನೆ ಮಾಡುವ ಪರಿಸ್ಥಿತಿಯಲ್ಲಿ ಕೂಡ ಇಲ್ಲವಾಗಿದ್ದರೆ. ಸಂವಿಧಾನದಲ್ಲಿ ಮೂಲಭೂತ ಹಕ್ಕು ಮತ್ತು ಮೂಲಭೂತ ಕರ್ತವ್ಯ ಇದ್ದ ಹಾಗೆ ಕಾಂಗ್ರೆಸ್ ಅವರಿಗೆ ಭ್ರಷ್ಟಾಚಾರ ಎನ್ನುವ ಒಂದು ಹಕ್ಕನ್ನು ಹೆಚ್ಚು ನೀಡಿದ್ದಾರೆ ಎಂದರು.

ಇದನ್ನೂ ಓದಿ : ಸಂತೆಯಾಗಿ ಮಾರ್ಪಟ್ಟ ಸರ್ಕಾರಿ ಶಾಲಾವರಣ

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ಪಂಚ ಗ್ಯಾರಂಟಿ ಮೇಲೆ ಈ ಕಾಂಗ್ರೆಸ್ ಸರ್ಕಾರ ಆರಿಸಿ ಬಂದಿದೆ. ಈ ಗ್ಯಾರಂಟಿ ನಂಬಿ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಆದರೆ ಈಗ ಒಂದು ಅಭಿವೃದ್ಧಿ ಕೆಲಸ ಕೂಡ ಆಗುತ್ತಿಲ್ಲ. ಅಭಿವೃದ್ಧಿ ಕೆಲಸ ಮಾಡಲು ಬಂದಿರುವ ಎಲ್ಲಾ ಎಂ.ಎಲ್.ಎ.ಗಳು ನಿರಾಶಾದಾಯಕವಾಗಿದ್ದಾರೆ. ಈ ಸರ್ಕಾರವನ್ನು ವಿರೋಧ ಪಕ್ಷದವರು ದುಡಿಹಾಕಬೇಕಾಗಿಲ್ಲ. ಅವರಲ್ಲೇ ಜಗಳ ಮತ್ತು ಸಮಸ್ಯೆ ಉಂಟಾಗಿ ಸರ್ಕಾರ ಬಿದ್ದು ಹೋಗುತ್ತದೆ ಎಂದರು.

ಇದನ್ನೂ ಓದಿ : ಜೋಯಿಡಾ ಮೂಲದ ಪತ್ರಕರ್ತನಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮನವಿ (Memorandum) ಸ್ವೀಕರಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ, ಯುವ ಮೋರ್ಚಾ ಅಧ್ಯಕ್ಷ ಸುನೀಲ ಕಾಮತ ಸೇರಿದಂತೆ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ :  ಭಟ್ಕಳದ ಕುವರನಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ